ಕೆಂಪುಕಲ್ಲು ಉದ್ಯಮ ರಕ್ಷಣೆ ಆಗ್ರಹಿಸಿ ಪ್ರತಿಭಟನೆ

 ಕೆಂಪುಕಲ್ಲು ಮಾಲೀಕರ ಸಂಘಟನೆ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರಮುಖರಾದ ಎನ್.ಎ.ನೆಲ್ಲಿಕುನ್ನು, ಸುಧಾಕರ ಪೂಜಾರಿ, ನಾರಾಯಣನ್ ಕೊಳತ್ತೂರು ಮೊದಲಾದವರಿದ್ದರು.
ಕೆಂಪುಕಲ್ಲು ಮಾಲೀಕರ ಸಂಘಟನೆ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರಮುಖರಾದ ಎನ್.ಎ.ನೆಲ್ಲಿಕುನ್ನು, ಸುಧಾಕರ ಪೂಜಾರಿ, ನಾರಾಯಣನ್ ಕೊಳತ್ತೂರು ಮೊದಲಾದವರಿದ್ದರು.
Published on
ಕೇರಳ ರಾಜ್ಯ ಕೆಂಪುಕಲ್ಲು ಉತ್ಪಾದಕರ ಮಾಲೀಕರ ಸಂಘ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಧರಣಿಯಲ್ಲಿ ಕೆಂಪುಕಲ್ಲು ಕ್ವಾರಿ ಮಾಲೀಕರು ತಮ್ಮ ಆಕ್ರೋಶ ಪ್ರಕಟಿಸಿದರು. ಸಾವಿರಾರು ಮಂದಿ ಕಾರ್ಮಿಕ ಬೇಡಿಕೆ ಮುಂದಿರಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಮುಷ್ಕರದ ಭಾಗವಾಗಿ, ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಧರಣಿ ಆಯೋಜಿಸಲಾಗಿತ್ತು. ಧರಣಿಗೆ ಪೂರ್ವಭಾವಿಯಾಗಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net