ಸೌಹಾರ್ದ ಟ್ರೋಫಿ ಸಂಪನ್ನ ವಿಜೇತರಿಗೆ ಬಹುಮಾನ ವಿತರಣೆ

ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಟ್ಯಾಕ್ಸಿ ಚಾಲಕರ ತಂಡಕ್ಕೆ ಮೋನಪ್ಪ ಭಂಡಾರಿ ಹಾಗೂ ಇತರ ಅತಿಥಿಗಳು ಬಹುಮಾನ ವಿತರಿಸಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಟ್ಯಾಕ್ಸಿ ಚಾಲಕರ ತಂಡಕ್ಕೆ ಮೋನಪ್ಪ ಭಂಡಾರಿ ಹಾಗೂ ಇತರ ಅತಿಥಿಗಳು ಬಹುಮಾನ ವಿತರಿಸಿದರು.
Published on
ಮಂಗಳೂರು: ಕ್ರೀಡಾಕೂಟಗಳಿಂದ ಎಲ್ಲರೂ ಜತೆಗೂಡಲು ಸಾಧ್ಯವಾಗುವುದರಿಂದ ಬಾಂಧವ್ಯ ವೃದ್ಧಿಯಾಗಿ ಶಾಂತಿ, ಸೌಹಾರ್ದ ವಾತಾವರಣ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ ಹೇಳಿದರು.
ದ.ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ವತಿಯಿಂದ ಸಂಘದ ಸದಸ್ಯರಿಗೆ ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡು ದಿನಗಳ ಸೌಹಾರ್ದ ಟ್ರೋಫಿ 2026 ಲೀಗ್ ಕ್ರಿಕೆಟ್ ಪಂದ್ಯಾಟದ ಸಮಾರೋಪದಲ್ಲಿ ಮಂಗಳವಾರ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಚಿನ್ನದ ಪದಕ ವಿಜೇತೆ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ, ಹಿರಿಯ ಪತ್ರಕರ್ತ ಹರೀಶ್ ಮೋಟುಕಾನ ಹಾಗೂ ಯೂ ಟ್ಯೂಬರ್ ವಿಜೆ ವಿಖ್ಯಾತ್ ಅವರ ಸಾಧನೆ ಪರಿಗಣಿಸಿ ಈ ಸಂದರ್ಭ ಸನ್ಮಾನಿಸಲಾಯಿತು.
ಕಾಂಗ್ರೆಸ್ ಮುಖಂಡ ಉದಯ ಆಚಾರ್, ಅಸೋಸಿಯೇಶನ್ ಅಧ್ಯಕ್ಷ ಆನಂದ ಕೆ., ಉಪಾಧ್ಯಕ್ಷ ಮೋಹನ್‌ದಾಸ್ ಸುರತ್ಕಲ್,ಹರೀಶ್‌ಶೆಟ್ಟಿ ಕುತ್ತಾರ್, ರೋಷನ್ ಕಿನ್ನಿಗೋಳಿ,ಕೋಶಾಧಿಕಾರಿ ಸುರೇಶ್ ಸಾಲಿಯಾನ್, ಮಾಜಿ ಅಧ್ಯಕ್ಷರಾದ ದಿನೇಶ್ ಕುಂಪಲ, ಮಾಜಿ ಉಪಾಧ್ಯಕ್ಷ ನಾಗಪ್ಪ ಅಡ್ಯಾರ್, ಮಾಜಿ ಕಾರ್ಯಾಧ್ಯಕ್ಷ ಪ್ರಮೋದ್ ಕುಮಾರ್ ಉಳ್ಳಾಲ, ಮಾಜಿ ಕಾರ್ಯದರ್ಶಿಗಳಾದ ಶುಭಕರ ಶೆಟ್ಟಿ, ಲೋಕೇಶ್ ಕಶೆಕೋಡಿ, ಕ್ರೀಡಾ ಸಂಚಾಲಕ ಎಂ.ಕೃಷ್ಣ, ನಾಗೇಶ್ ಮಿತ್ತಡ್ಕ, ಕರುಣಾಕರ ಕುಂಟಿಕಾನ, ಅಬ್ದುಲ್ ಅಜೀಜ್, ತೀರ್ಪುಗಾರರಾದ ಪ್ರದೀಪ್ ಕೊಟ್ಟಾರಿ, ಶ್ರೀರಾಜ್, ಕುಂಪಲ, ವಿವೇಕ್ ಬೋಳೂರು ಮೊದಲಾದವರು ಉಪಸ್ಥಿತರಿದ್ದರು.
ಟ್ಯಾಕ್ಸಿಕ್ಯಾಬ್ ಚಾಲಕರಿಗೆ ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಸ್ವಾಗತಿಸಿದರು. ಪ್ರಜ್ಞಾ ಓಡಿಳ್ನಾಳ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾವಳಿಯ ವಿಜೇತರು
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಟ್ಯಾಕ್ಸಿ ಚಾಲಕರ ತಂಡ ಪ್ರಥಮ, ಆಲ್ ವೈಟ್ಸ್ ಪಿ ವಿ ಎಸ್ ಟ್ಯಾಕ್ಸಿ ಚಾಲಕರ ದ್ವಿತೀಯ, ಸುರತ್ಕಲ್ ಫ್ರೆಂಡ್ಸ್ ತೃತೀಯ, ಸರಣಿ ಶ್ರೇಷ್ಠ ಪ್ರಶಸ್ತಿ ಮಂಗಳೂರು ಸೆಂಟ್ರಲ್ ರೈಲ್ವೆ ತಂಡದ ಪೃಥ್ವಿರಾಜ್, ಉತ್ತಮ ಬೌಲರ್ ಆಲ್ ವೈಟ್ಸ್ ಪಿ ವಿ ಎಸ್ ತಂಡದ ಲೋಹಿತ್ ಹಾಗೂ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ವಸಂತ್ ದೇವಿನಗರ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net