ರಸ್ತೆ ದುರಸ್ತಿಗೆ ಆಗ್ರಹಿಸಿ ಖಾಸಗಿ ಬಸ್ ಮುಷ್ಕರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೈಡ್’ ಬಸ್ ಕಾರ್ಮಿಕರ ಸಂಘಟನೆಯಿಂದ ಸಾಂಕೇತಿಕ ಮುಷ್ಕರ
  • ಪ್ರಯಾಣಿಕರ ಪರದಾಟ
  • ಕ್ರಮ ಕೈಗೊಳ್ಳದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಎಚ್ಚರಿಕೆ
ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಶೀಘ್ರ ದುರಸ್ತಿಗೆ ಒತ್ತಾಯ

ಸಾಂಕೇತಿಕ ಮುಷ್ಕರ ಸೂಚನೆಯಾಗಿದ್ದು, ತಕ್ಷಣ ದುರಸ್ತಿ ಕಾರ್ಯ ನಡೆಸದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಿರುವುದಾಗಿ ಜಿಲ್ಲಾ ಬಸ್ ಮಾಲೀಕರ ಸಂಘಟನೆ ಅಧ್ಯಕ್ಷ ಕೆ.ಗಿರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹೊಂಡ ಬಿದ್ದ ರಸ್ತೆಯಲ್ಲಿ ಸಂಚಾರದಿಂದ ಬಸ್‌ಗಳಿಗೆ ಹಾನಿಯುಂಟಾಗುತ್ತಿರುವುದಲ್ಲದೆ, ಪ್ರಯಾಣಿಕರಿಗೂ ಸಮಸ್ಯೆ ಎದುರಾಗುತ್ತಿದೆ. ಲಕ್ಷಾಂತರ ರೂ. ತೆರಿಗೆ ಸಂಗ್ರಹಿಸುವ ಸರ್ಕಾರ, ಸೂಕ್ತ ರಸ್ತೆ ನಿರ್ಮಾಣಕ್ಕೆ ಮುಂದಾಗದಿರುವುದು ಜನತೆಗೆ ಎಸಗುವ ವಂಚನೆ. ರಸ್ತೆಯನ್ನು ತಾತ್ಕಾಲಿಕ ದುರಸ್ತಿ ನಡೆಸಿ, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ರೂಟಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ತಿಳಿಸಿದ್ದಾರೆ. 
ಮಹಮ್ಮದ್ ಕುಞಿ ಪಿ.ಎ., ಮಹಮ್ಮದ್ ಪಿಲಾಂಗಟ್ಟೆ ಪಿ.ಎಂ.ಎಸ್., ಹಾರಿಸ್ ಬದಿಯಡ್ಕ, ಶಾಹಿದ್ ಬಿಲಾಲ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net