ಕಾರಾಗೃಹಕ್ಕೆ ಪೊಲೀಸ್ ದಾಳಿ 3 ಮೊಬೈಲ್ ಪತ್ತೆ

ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಬರ್ಕೆ ಠಾಣೆ ಪೊಲೀಸರು ದಾಳಿ
ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಬರ್ಕೆ ಠಾಣೆ ಪೊಲೀಸರು ದಾಳಿ
Published on
ಮಂಗಳೂರು : ನಗರದ ಕೊಡಿಯಾಲಬೈಲ್ ನಲ್ಲಿರುವ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಬರ್ಕೆ ಠಾಣೆ ಪೊಲೀಸರು ದಾಳಿ ನಡೆಸಿದ್ದು ವಿಚಾರಣಾಧೀನ ಕೈದಿಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ, ಮೂರು ಮೊಬೈಲ್ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆ.6ರಂದು ಮಧ್ಯರಾತ್ರಿ ಜೈಲು ಸುಪರಿಡೆಂಟ್ ನೇತೃತ್ವದಲ್ಲಿ ಪೊಲೀಸರು ಕಾರಾಗೃಹದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು ‘ಎ’ ಮತ್ತು ‘ಬಿ’ ಬ್ಯಾರಕ್ ನಲ್ಲಿ ತಪಾಸಣೆನೆ ನಡೆಸಿದ್ದಾರೆ.
ಈ ವೇಳೆ, ‘ಎ’ ಬ್ಯಾರಕ್ ನಲ್ಲಿ ಎರಡು ಮತ್ತು ‘ಬಿ’ ಬ್ಯಾರಕ್ ನಲ್ಲಿ ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ.
‘ಎ’ ಬ್ಯಾರಕ್ ನಲ್ಲಿ ಮುಸ್ಲಿಂ ಕೈದಿಗಳನ್ನು ಇರಿಸಲಾಗಿದ್ದು ಇಬ್ರಾಹಿಂ ಹರ್ಷದ್ ಮತ್ತು ಅಸ್ಕರ್ ಎಂಬಿಬ್ಬರು ಕೀ ಪ್ಯಾಡ್ ಮೊಬೈಲ್ ಫೋನ್ ಗಳನ್ನು ಹೊಂದಿದ್ದರು. ‘ಬಿ’ ಬ್ಯಾರಕ್ ನಲ್ಲಿ ಹಿಂದು ಕೈದಿಗಳಿದ್ದು ಶೋಧ ಸಂದರ್ಭದಲ್ಲಿ ಚಂದ್ರಹಾಸ್ ಪೂಜಾರಿ ಎಂಬ ವಿಚಾರಣಾಧೀನ ಕೈದಿಯಲ್ಲಿ ಕೀ ಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net