ಕೋಳಿ ಅಂಕದ ಹೆಸರಿನಲ್ಲಿ ಜೂಜಾಟ ನಡೆಸಿದರೆ ಸಹಿಸಲಾಗದು. ಅಂಥ ಸಂದರ್ಭಗಳಲ್ಲಿ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲು ಹಿಂಜರಿಯುವುದಿಲ್ಲ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದರು. ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಸೀಮಿತ ಸಮಯ(ಕೇವಲ 3ಗಂಟೆ)ದಲ್ಲಿ ಮಾತ್ರ ನಡೆಯಬೇಕು, ಜೂಜು ರಹಿತ ಕೋಳಿ ಅಂಕ ನಡೆಯಬೇಕು, ಸೀಮಿತ ಸಮಯದಲ್ಲಿ ನಡೆಯುವ ಸಾಂಪ್ರಾದಾಯಿಕ ಕೋಳಿ ಅಂಕ ಪೊಲೀಸರ ಉಪಸ್ಥಿತಿ, ಕಣ್ಗಾವಳಿನಲ್ಲೇ ನಡೆಯಬೇಕು ಎಂಬ ಮೌಕಿಕ ಷರತ್ತಿನಲ್ಲಿ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಆಡಳಿತ ಸಮಿತಿಗೆ ಪೊಲೀಸರು ಸೂಚನೆ ನೀಡಿದ್ದರು.