ಈ ಹಿಂದೆ ದಕ್ಷ ಕೆಎಎಸ್ ಅಧಿಕಾರಿ ರಶ್ಮಿ ಅವರು ಪಿಲಿಕುಳದ ಆಡಳಿತ ಹೊಣೆಗಾರಿಕೆ ಸಂದರ್ಭ ಬಿಎ ಖಾದರ್ ಗುತ್ತಿಗೆದಾರರ ಟೆಕ್ನಿಕಲ್ ಬಿಡ್‌ನ್ನು ಪಿಲಿಕುಳ ಡೆವಲಪ್‌ಮೆಂಟ್ ಅಥಾರಿಟಿ ಪರಿಶೀಲಿಸದೆ ಇರುವುದನ್ನು, ಅಸಮರ್ಪಕ ಜಿಎಸ್‌ಟಿ ದಾಖಲಾತಿ, ಟ್ರೇಡ್ ಲೈಸೆನ್ಸ್, ಎಫ್‌ಎಸ್‌ಎಸ್‌ಎಐ ದಾಖಲಾತಿಗಳು, ಆಹಾರದ ಪ್ರಮಾಣ ಮತ್ತು ಪೂರೈಕೆ ಮಾಡಿದ ಬಿಲ್‌ಗಳಿಗೂ ವ್ಯತ್ಯಾಸಗಳನ್ನು ಪತ್ತೆಹಚ್ಚಿ ಬಿಲ್ ಮೊತ್ತವನ್ನು ತಡೆಹಿಡಿದಿದ್ದರು. ಮಾತ್ರವಲ್ಲದೆ ಪಾರದರ್ಶ್ಕ ರೀತಿಯಲ್ಲಿ ಹೊಸ ಇ-ಪ್ರಕ್ರೂರ್‌ಮೆಂಟ್ ಟೆಂಡರ್ ನಡೆಸಲು ನಿರ್ದೇಶಿಸಿದ್ದರು. ಇವರ ವರ್ಗಾವಣೆ ಬಳಿಕ ಇವರ ಆದೇಶವನ್ನು ಗಾಳಿಗೆ ತೂರಲಾಗಿತ್ತು. ಬಿ.ಎ. ಖಾದರ್ 2025ರ ಜೂನ್ ತಿಂಗಳಿನಲ್ಲಿ ಮೃತಪಟ್ಟಿದ್ದು, ನಂತರವೂ ಕೂಡ ಆತನ ಕುಟುಂಬದವರಿಗೆ ಆಹಾರ ಪೂರೈಕೆಯ ಗುತ್ತಿಗೆ ನೀಡಲಾಗಿತ್ತು. ತಕರಾರು ಬಂದ ಹಿನ್ನೆಲೆಯಲ್ಲಿ ಹೊಸ ಇ-ಪ್ರಕ್ರೂರ್ ಮೆಂಟ್ ಟೆಂಡರ್ ನಡೆಸಲಾಗಿದ್ದು, 2025ರ ಆಗಸ್ಟ್ 1ರಿಂದ ಮುಂದಿನ 1 ವರ್ಷದ ಅವಧಿಗೆ ಕೇವಲ 99 ಲಕ್ಷ ರೂ.ಗೆ ಬಳ್ಳಾರಿ ಮೂಲದ ಮಾಷ ಅಲ್ಲಾ ಮೀಟ್ ಸಪ್ಲೇಯರ್‌ಗೆ ಆಹಾರ ಪೂರೈಕೆಯ ಟೆಂಡರ್ ಪಡೆದುಕೊಂಡಿತ್ತು. ಟೆಂಡರ್ ಕೈತಪ್ಪದ ಹಿನ್ನೆಲೆಯಲ್ಲಿ ಬಿ.ಎ. ಖಾದರ್ ಕುಟುಂಬ ಕಂಗಾಲಾಗಿದ್ದು, ಹೊಸ ಗುತ್ತಿಗೆದಾರರಿಗೆ ಬೆದರಿಕೆಯನ್ನೂ ಹಾಕಿದ ಘಟನೆಯೂ ನಡೆದಿತ್ತು.