ದೇವಸ್ಥಾನಗಳಿಗಿದೆ ಸಮಾಜ ಒಗ್ಗೂಡಿಸುವ ಶಕ್ತಿ : ಎಡನೀರು ಸ್ವಾಮೀಜಿ ಆಶೀರ್ವಚನ

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು.
Published on

ಬದಿಯಡ್ಕ: ದೇವಸ್ಥಾನಗಳು ಸಮಾಜವನ್ನು ಒಂದುಗೂಡಿಸುವ ತಾಣವಾಗಿದೆ ಎಂದು ಶ್ರೀ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.


ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ 2026 ಏಪ್ರಿಲ್ 17ರಿಂದ 28ರ ವರೆಗೆ ಜರುಗಲಿದ್ದು, ಪೂರ್ವಭಾವಿಯಾಗಿ ಭಾನುವಾರ ಆಮಂತ್ರಣ ಪತ್ರಿಕೆ ಹಾಗೂ ಲಾಂಛನ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಯುವಕಲಾವಿದ ದೀಕ್ಷಿತ್ ಬದಿಯಡ್ಕ ರಚಿಸಿದ ಬ್ರಹ್ಮಕಲಶೋತ್ಸವದ ಲಾಂಛನವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.

ರಕ್ಷಾಧಿಕಾರಿ ಬ್ರಹ್ಮಶ್ರೀ ಯೋಗೀಶ ಕಡಮಣ್ಣಾಯ ಆರಿಕ್ಕಾಡಿ, ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವಾಸುದೇವ ಭಟ್ ಅಗಲ್ಪಾಡಿ, ಸೇವಾಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲಗುತ್ತು, ಪ್ರಮುಖರಾದ ಶಂಕರನಾರಾಯಣ ಮಯ್ಯ ಬದಿಯಡ್ಕ, ಶ್ಯಾಮ್‌ಪ್ರಸಾದ್ ಕಬೆಕ್ಕೋಡು, ಸದಾಶಿವ ಬಂಗೇರ ಮುರಿಯಂಕೂಡ್ಲು, ಡಾ.ಶ್ರೀನಿಧಿ ಸರಳಾಯ, ಕೊಡ್ಯಮೆ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಆಡಳಿತ ಮಂಡಳಿ ಸದಸ್ಯರಾದ ಸೀತಾರಾಮ ನವಕಾನ, ಕೃಷ್ಣ ಬದಿಯಡ್ಕ, ಡಾ.ವೇಣುಗೋಪಾಲ ಕಳೆಯತ್ತೋಡಿ, ಅಶೋಕ್ ರೈ ಕೊರೆಕ್ಕಾನ, ಜಯಪ್ರಕಾಶ್ ಶೆಟ್ಟಿ ಕಡಾರುಬೀಡು, ಗೋಪಾಲ ಭಟ್ ಪಟ್ಟಾಜೆ, ಪ್ರೊ.ಎ.ಶ್ರೀನಾಥ್, ಈಶ್ವರ ಭಟ್ ಪೆರ್ಮುಖ, ಭಾಸ್ಕರ ಪಂಜಿತ್ತಡ್ಕ, ಗಣೇಶ ಪ್ರಸಾದ ಕಡಪ್ಪು, ಸತೀಶ ಪುದ್ಯೋಡು, ರಾಜೇಶ್ ಅಗಲ್ಪಾಡಿ ಮೊದಲಾದವರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಡಾ.ಶ್ರೀಶಕುಮಾರ ಪಂಜಿತ್ತಡ್ಕ ನಿರೂಪಿಸಿದರು. ಜತೆ ಕಾರ್ಯದರ್ಶಿ ಉದಯಶಂಕರ ಪಿ.ಎಸ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net