ಶಾಲೆಯೊಂದು ಏಳಿಗೆಯಾದರೆ ಊರು ಉದ್ಧಾರ : ತಾಪಂ ಇಒ ನವೀನ್‌ ಭಂಡಾರಿ ಅನಿಸಿಕೆ

ಪೆರಾಬೆ ಸರ್ಕಾರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ‘ಹೆಜ್ಜೆಗೆಜ್ಜೆ ನಾದ’ವನ್ನು ಪುತ್ತೂರು ಮತ್ತು ಕಡಬ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉದ್ಘಾಟಿಸಿದರು.
ಪೆರಾಬೆ ಸರ್ಕಾರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ‘ಹೆಜ್ಜೆಗೆಜ್ಜೆ ನಾದ’ವನ್ನು ಪುತ್ತೂರು ಮತ್ತು ಕಡಬ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉದ್ಘಾಟಿಸಿದರು.
Published on
ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಎಂದರೆ ಶಿಕ್ಷಕರು ಹಾಗೂ ಪಾಲಕರ ಜತೆಗೆ ಊರವರ ಸಹಕಾರವೂ ಮುಖ್ಯವಾಗಿರುತ್ತದೆ. ಶಾಲೆಯೊಂದು ಏಳಿಗೆಯಾದರೆ ಊರೊಂದು ಉದ್ಧಾರವಾದಂತೆ ಎಂದು ಪುತ್ತೂರು ಮತ್ತು ಕಡಬ ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೇಳಿದರು.
ಪೆರಾಬೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2025- 26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ‘ಹೆಜ್ಜೆಗೆಜ್ಜೆ ನಾದ’, ಪ್ರತಿಭಾ ಪುರಸ್ಕಾರ ಹಾಗೂ ಶೌಚಗೃಹಗಳ ಉದ್ಘಾಟಿಸಿ ಮಾತನಾಡಿದರು.
ನರೇಗಾ ಯೋಜನೆ ಹಾಗೂ ತಾಲೂಕು ಪಂಚಾಯಿತಿ ಅನುದಾನದಿಂದ ನಿರ್ಮಾಣಗೊಂಡ ಬಾಲಕರ ಹಾಗೂ ಬಾಲಕಿಯರ ಶೌಚಗೃಹ ಸಮುಚ್ಚಯ ಕೊಠಡಿಗಳ ಉದ್ಘಾಟನೆಯನ್ನು ಶರವೂರು ಶ್ರೀ ದುರ್ಗಾಪರಮೇಶ್ವರಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಹೇಮಂತ್ ರೈ ಮನವಳಿಕೆಗುತ್ತು ನೆರವೇರಿಸಿದರು.
ಶಾಲೆಯಿಂದ ವರ್ಗಾವಣೆಗೊಂಡ ಮುಖ್ಯ ಶಿಕ್ಷಕಿ ಸುಚೇತಾಕುಮಾರಿ ಬಿ., ಅಕ್ಷರ ದಾಸೋಹ ಸಿಬ್ಬಂದಿ ಜಯಶ್ರೀ, ಸರಸ್ವತಿ ಹಾಗೂ ಗೌರವ ಶಿಕ್ಷಕಿ ಸವಿತಾ ಅವರನ್ನು ಗೌರವಿಸಲಾಯಿತು.
ಪೆರಾಬೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ದಯಾನಂದ ರೈ ಮನವಳಿಕೆಗುತ್ತು, ಪ್ರಕಾಶ್ ಬಾಕಿಲ, ಮೋಹನದಾಸ್ ರೈ ಪರಾರಿ, ಲೀಲಾವತಿ, ಹೇಮಲತಾ ಪ್ರದೀಪ್, ನಾಗಪ್ಪ ಗೌಡ ಮರುವಂತಿಲ, ಇಬ್ರಾಹಿಂ ಪೆರಾಬೆ, ಸಂಜೀವ ಶೆಟ್ಟಿ ಪರಾರಿ, ರಾಮಣ್ಣಗೌಡ ಪೇರಾಬೆ ಉಪಸ್ಥಿತರಿದ್ದರು. ಸುಶ್ಮಿತಾ ಬಿ. ಬಹುಮಾನ ಪಟ್ಟಿ ವಾಚಿಸಿದರು. ಮಹದೇವಸ್ವಾಮಿ ಡಿ. ವಂದಿಸಿದರು. ಜಯಪ್ರಕಾಶ್ ಜಿ.ಪಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net