

ಉಪ್ಪಿನಂಗಡಿ: ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನಸಾವಾನ್ಯರು ಬೆಲೆ ಏರಿಕೆಯ ಸುಳಿಗೆ ಸಿಲುಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಪೂರ್ಣ ಪ್ರವಾಣದಲ್ಲಿ ಜಾರಿಗೆ ಬರಲು ಅತೀ ಶ್ರೀದಲ್ಲಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಬೇಕು. ಅದು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಅಧಿಕಾರದಿಂದ ತೊಲಗಬೇಕು ಎಂದು ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಬಜತ್ತೂರು ಗ್ರಾಮದ ವಳಾಲಿನಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಡೆದ ನಮ್ಮ ಹಕ್ಕು ನಮಗೆ ನೀಡಿ ಹಕ್ಕೊತ್ತಾಯ ಸಭೆಯಲ್ಲಿ ವಾತನಾಡಿದರು.
ರೈತರಿಗೆ ಬೆಳೆವಿಮೆ ನೀಡಲು ಹಣವಿಲ್ಲ. ಹಾಲು, ಮೊಸರಿನಿಂದ ಹಿಡಿದು ಎಲ್ಲದರ ಬೆಲೆಯೂ ಏರಿಕೆಯಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಪುತ್ತೂರು ಶಾಸಕರು ಸುಳ್ಳು ಹೇಳಿಕೊಂಡು ಪುಕ್ಕಟೆ ಪ್ರಚಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಜನ ಕಾಂಗ್ರೆಸ್ ಆಡಳಿದಿಂದ ರೋಸಿ ಹೋಗಿದ್ದು, 2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದರು.
ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಮುಕುಂದ ಬಜತ್ತೂರು ವಾತನಾಡಿ, ಸಂಜೀವ ಮಠಂದೂರು ಶಾಸಕರಾಗಿದ್ದಾಗ ಬಜತ್ತೂರು ಗ್ರಾಮಕ್ಕೆ 100 ಕೋಟಿ ರೂ.ಗೂ ಅಧಿಕ ಅನುದಾನ ಬಿಡುಗಡೆಯಾಗಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇದೀಗ ಗ್ರಾಮಕ್ಕೆ ಚಿಕ್ಕಾಸು ಬಂದಿಲ್ಲ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಸುನೀಲ್ಕುವಾರ್ ದಡ್ಡು, ಶಿವಕುವಾರ್, ನಾಗೇಶ್, ಆನಂದ ಮೇಲೂರು ಉಪಸ್ಥಿತರಿದ್ದರು. ಸಭೆಯ ಬಳಿಕ ಹಲವು ಬೇಡಿಕೆಗಳ ಮನವಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ವಿದ್ಯಾಧರ ಜೈನ್, ಸುರೇಶ್ ಅತ್ರಮಜಲು, ಯಶವಂತ ಗೌಡ, ನಿರಂಜನ, ಉಷಾ ಮುಳಿಯ, ಸದಾನಂದ ನೆಕ್ಕಿಲಾಡಿ, ಉದಯಕುವಾರ್, ವಿಶ್ವನಾಥ ಗೌಡ, ಸ್ಮಿತಾ, ಆನಂದ ಕೆ.ಎಸ್. ಮತ್ತಿತರರು ಉಪಸ್ಥಿತರಿದ್ದರು. ಉಮೇಶ್ ಓಡ್ಲಜಾಲು ಸ್ವಾಗತಿಸಿದರು. ವಸಂತ ಪಿಜಕ್ಕಳ ವಂದಿಸಿದರು. ಗಂಗಾಧರ ಗೌಡ ನಿರೂಪಿಸಿದರು.