

ಹೆಬ್ರಿ: ಪಾಲಕರು ಸಂಸ್ಥೆಯ ಶಿಕ್ಷಣ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರೊಂದಿಗೆ ಕೈಜೋಡಿಸಿದಾಗ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಮಕ್ಕಳಲ್ಲಿರುವ ಕಲೆಯನ್ನು ಶಿಕ್ಷಕರು ಗಮನಿಸಿ ಸೂಕ್ತ ವೇದಿಕೆ ನೀಡಿದಾಗ ಹೆತ್ತವರು ಹುರಿದುಂಬಿಸಬೇಕು ಎಂದು ಅಮೃತ ಭಾರತಿ ವಿದ್ಯಾಲಯ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಹೇಳಿದರು.
ಶಿಕ್ಷಕರಾದ ಮಹೇಶ್ ಹೈಕಾಡಿ, ಸಾವಿತ್ರಿ ಕಿಣಿ, ಪಂಚಮಿ, ಮೀನಾಕ್ಷಿ, ಸೌಪರ್ಣಿಕಾ ಜೋಷಿ, ನವ್ಯಾ, ಸುಚಿತ್ರಾ, ಅಂಜಲಿ, ಅನನ್ಯಾ, ವಿಶ್ವಾಸ್ ಉಪಸ್ಥಿತರಿದ್ದರು. ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಕಾರ್ಯಕ್ರಮ ನಿರೂಪಿಸಿದರು.