ದೇವತಾ ಕಾರ್ಯದಲ್ಲಿರಲಿ ಪ್ರಮಾಣಿಕತೆ PANJIGUDDE

ಕೊಡುಗೈದಾನಿ ನಿವೃತ್ತ ಶಿಕ್ಷಕಿ ರೇವತಿ ಆಕಿರೆಬರೆ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಅಶೋಕ್ ಕುಮಾರ್ ರೈ, ಸುಮಾ ಅಶೋಕ್, ಸತ್ಯಶಂಕರ ಭಟ್, ರಂಜಿತಾ ಸತ್ಯಶಂಕರ್, ಈಶ್ವರ ಭಟ್, ಜಯಶ್ರೀ ಈಶ್ವರ ಭಟ್ ಉಪಸ್ಥಿತರಿದ್ದರು.
ಕೊಡುಗೈದಾನಿ ನಿವೃತ್ತ ಶಿಕ್ಷಕಿ ರೇವತಿ ಆಕಿರೆಬರೆ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಅಶೋಕ್ ಕುಮಾರ್ ರೈ, ಸುಮಾ ಅಶೋಕ್, ಸತ್ಯಶಂಕರ ಭಟ್, ರಂಜಿತಾ ಸತ್ಯಶಂಕರ್, ಈಶ್ವರ ಭಟ್, ಜಯಶ್ರೀ ಈಶ್ವರ ಭಟ್ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ
ಪುತ್ತೂರು: ಮನುಷ್ಯ ಜೀವನ ಮಾಡುವ ಕಾರ್ಯದಿಂದ ಕಲಿಯಬೇಕು. ಪ್ರೀತಿ ವಿಶ್ವಾಸ ಇದ್ದಾಗ ಜನರು ಹತ್ತಿರವಾಗುತ್ತಾರೆ. ಕೀರ್ತಿ ರಾಜ್ಯಕ್ಕೆ ಪಸರಿಸುವ ಕಾರ್ಯವಾಗಬೇಕು. ಮನೆಯಲ್ಲಿ ಗಣಪತಿ ಇಟ್ಟು ಹಿತೈಷಿಗಳೊಂದಿಗೆ ಸಂಭ್ರಮ ಪಡುತ್ತಾರೆ. ದೇವಸ್ಥಾನದ ಕಾರ್ಯ ಪ್ರಾಮಾಣಿಕತೆಯಿಂದ ಮಾಡಿಕೊಂಡು ಬಂದಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಮುರ ಪಂಜಿಗುಡ್ಡೆಯಲ್ಲಿ ಮಂಗಳವಾರ ಗಣೇಶೋತ್ಸವ, ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಸಹಾಯಹಸ್ತ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳವಾರ ಬೆಳಗ್ಗೆ ೧೦೮ಕಾಯಿ ಗಣಪತಿ ಹವನ ನಡೆಯಿತು. ಸಂಜೆ ಗಣಪತಿ ವಿಸರ್ಜನೆ ಕಾರ್ಯಕ್ರಮ ಸಂಪನ್ನಗೊಂಡಿತು. ಕೊಡುಗೈದಾನಿ ನಿವೃತ್ತ ಶಿಕ್ಷಕಿ ರೇವತಿ ಆಕಿರೆಬರೆ ಅವರನ್ನು ಸನ್ಮಾನಿಸಲಾಯಿತು. ೧೯ನೇ ವರ್ಷದ ಗಣಪತಿಯನ್ನು ವರಣ್ ಆರಾಧಿಸಿದರು.
ಶಾಸಕರ ಪತ್ನಿ ಸುಮಾ ಅಶೋಕ್, ಬಿಂದು ಮಾಲೀಕ ಸತ್ಯಶಂಕರ ಭಟ್, ಪತ್ನಿ ರಂಜಿತಾ ಸತ್ಯಶಂಕರ್, ಪ್ರಗತಿಪರ ಕೃಷಿಕ ಪಂಜಿಗುಡ್ಡೆ ಈಶ್ವರ ಭಟ್, ಪತ್ನಿ ಜಯಶ್ರೀ ಈಶ್ವರ ಭಟ್ ಉಪಸ್ಥಿತರಿದ್ದರು.

೬೨ಸಾವಿರ ಕೊಡುಗೆ:

ಸಮಾಜದಲ್ಲಿ ಅಶಕ್ತರಾದವರನ್ನು, ಅನಾರೋಗ್ಯ ಪೀಡಿತರನ್ನು ಹುಡುಕಿ ಗಣೇಶೋತ್ಸವ ಸಂದರ್ಭ ಸಹಾಯಹಸ್ತ ನೀಡುವ ಕಾರ್ಯ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ವರ್ಷ ಮಂಚ ಮೊಗೇರ, ಮಹಮ್ಮದ್ ಅಂಡೆಪುಣಿ, ಗಿರಿಜಾ ಬೇರಿಕೆ, ಸುಮಿತ್ರಾ ಶೇವಿರೆ, ರಾಮಣ್ಣ ಶೇವಿರೆ, ಸುಬ್ಬಣ ಭಟ್, ಕಿರಣ್ ಮಂಜಿಗುಡ್ಡೆ ಸೇರಿ ಹಲವರಿಗೆ ಸಹಾಯಹಸ್ತ ವಿತರಣೆ ಮಾಡಲಾಯಿತು.

ಮಕ್ಕಳ ಆಟದ ಗಣಪ

ಬಾಲ್ಯದಲ್ಲಿ ಮಕ್ಕಳು ತೋಡಿನಲ್ಲಿ ಆಟವಾಡುತ್ತಾ ಮರಳಿನ ಮೂಲಕ ಗಣಪತಿ ವಿಗ್ರಹ ರಚಿಸಿ ಆರಾಧಿಸುತ್ತಿದ್ದರು. ಪ್ರಾರಂಭದಲ್ಲಿ ಒಬ್ಬನಿಂದ ಪ್ರಾರಂಭವಾದ ಆರಾಧನೆ ಇಂದು ನೂರಾರು ಮಂದಿ ಸೇರಿಕೊಂಡು ಮಾಡುವಂತಾಗಿದೆ. ಗಣಪತಿಯನ್ನು ಕೆಲವು ವರ್ಷಗಳಿಂದ ವಿಜ್ರಂಭಣೆಯಿಂದ ಆರಾಽಸಿಕೊಂಡು ಬರಲಾಗುತ್ತಿದೆ. ಎರಡು ದಿನ ಪೂಜಿಸಿ, ವಿಜ್ರಂಭಣೆಯಿಂದ ವಿಸರ್ಜನಾ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net