

ಕೆಲವು ವರ್ಷಗಳು ಕಳೆದರೆ ಭತ್ತದಿಂದ ಅಕ್ಕಿ ಹೇಗೆ ಉತ್ಪಾದಿಸಲಾಗುತ್ತದೆ ಎಂಬುದು ಶಾಲಾ ಮಕ್ಕಳಿಗೆ ಚಿತ್ರದ ಮೂಲಕ ತಿಳಿಸಬೇಕಾದ ಪರಿಸ್ಥಿತಿ ಇದೆ. ಅಂತಹದ್ದರಲ್ಲಿ ನಾವು ಅದೃಷ್ಟವಂತರು. ಖುದ್ದಾಗಿ ಭತ್ತದ ನಾಟಿ ಮಾಡಿ, ಭತ್ತದ ಪೈರು ಕೊಯ್ಲು ಮಾಡುವ ಭಾಗ್ಯ ನಮಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಒಂದು ಅಗಳು ಅಕ್ಕಿಯ ಬೆಲೆ ಏನೆಂಬುದರ ಬಗ್ಗೆ ನಾವೇ ಇತರರಿಗೆ ಹೇಳಿ, ಅನ್ನ ವೇಸ್ಟ್ ಮಾಡದಂತೆ ತಿಳಿ ಹೇಳುತ್ತೇವೆ.
ಅಕ್ಕಿ ಉತ್ಪಾದನೆಯ ಹಿಂದಿನ ಕಷ್ಟ-ಶ್ರಮ ತಿಳಿಯಿತು. ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಾಲ್ಯಾನ್ ಪರಿವಾರದವರ ಸಹಕಾರದಿಂದ ಭತ್ತದ ಬೆಳೆಯ ಪೂರ್ಣ ಮಾಹಿತಿ ಸಿಕ್ಕಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಾಗಿ ಸಿಕ್ಕಿರುವ ಈ ಅನುಭವ ಜೀವನದುದ್ದಕ್ಕೂ ನೆನಪಿನಲ್ಲಿರುತ್ತದೆ.
ಇಂದೊಂದು ಉತ್ತಮ ಪ್ರಯತ್ನ. ಶಾಲಾ ಮಕ್ಕಳಿಗೆ ಅನ್ನದ ಬೆಲೆ, ನೆಲೆ ತಿಳಿಸುವಂತಹ ಕೆಲಸ ಇದಾಗಿದೆ. ಇಂತಹ ಚಟುವಟಿಕೆಗಳಿಗೆ ಗುರುಪುರ ವ್ಯವಸಾಯ ಸಂಘದಿಂದ ಪ್ರೋತ್ಸಾಹ ಸಿಗಲಿದೆ. ಹಡಿಲು ಗದ್ದೆಗಳಲಿ ಕೃಷಿ ಚಟುವಟಿಕೆ ನಡೆಯಬೇಕು. ಜಿಲ್ಲೆಯಲ್ಲಿ ಭತ್ತದ ಬೆಳೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಶಾಲಾ ಮಕ್ಕಳ ಮೂಲಕ ಅರಿವು ಮೂಡಿಸುವ ಮಾದರಿ ಕೆಲಸ ಇದಾಗಿದ್ದು, ಬೇರೆ ಕಡೆಗಳಲ್ಲೂ ನಡೆಯಬೇಕು.
ಸಂಘ-ಸಂಸ್ಥೆಗಳು ಮಾಡಬೇಕಾದ ಕೆಲಸ ಸಾಲ್ಯಾನ್ ಪರಿವಾರದವರು ಶಾಲಾ ಮಕ್ಕಳ ಮೂಲಕ ಮಾಡಿಸಿದ್ದಾರೆ. ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ಇಲ್ಲಿನ ಕೃಷಿಗೆ ಸಾವಯವ ಗೊಬ್ಬರ ಬಳಸಿರುವುದು ಹೆಚ್ಚು ಸೂಕ್ತವೆನಿಸಿದೆ.