_1763297440444.webp?w=480&auto=format%2Ccompress&fit=max)
_1763297440444.webp?w=480&auto=format%2Ccompress&fit=max)
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪ್ರಯುಕ್ತ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಗೆ ಭಕ್ತರು ಸಾಮೂಹಿಕವಾಗಿ ನಡೆಸುತ್ತಿರುವ ಭಕ್ತಿ ಭಜನೆಯ 13ನೇ ವರ್ಷದ ಪಾದಯಾತ್ರೆಗೆ ಶನಿವಾರ ಉಜಿರೆ ಜನಾರ್ದನ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು.
ಸಹಸ್ರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಮೊದಲಿಗೆ ಉಜಿರೆ ಶ್ರೀ ಜನಾರ್ದನ ದೇವರ ದರ್ಶನ ಮಾಡಿ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ರಸ್ತೆಯ ಒಂದು ಬದಿಯಲ್ಲಿ ಪಾದಯಾತ್ರೆ ಸಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ಸ್ವಯಂಸೇವಕರು ಕ್ರಮ ಕೈಗೊಂಡರು.
ಉಜಿರೆಯಲ್ಲಿ ಫಲಾಹಾರ, ಕುಡಿಯುವ ನೀರಿನ ವ್ಯವಸ್ಥೆ, ಶಾರದಾ ಮಂಟಪ, ಕೃಷ್ಣಾನುಗ್ರಹ ಸಭಾಭವನ ಹಾಗೂ ರಥಬೀದಿಯಲ್ಲಿ ಪಾದಯಾತ್ರಿಗಳಿಗೆ ವಿಶ್ರಾಂತಿ ವ್ಯವಸ್ಥೆಯನ್ನು ಪಾದಯಾತ್ರೆ ಸಮಿತಿ ವತಿಯಿಂದ ಮಾಡಲಾಗಿತ್ತು. ಉಜಿರೆ ಮುಖ್ಯ ವೃತ್ತದ ಬಳಿ ಭಜನಾ ತಂಡಗಳಿಂದ ಕುಣಿತ ಭಜನೆ ಹಾಗೂ ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು.
ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪೂರನ್ ವರ್ಮ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ, ಸಿರಿ ಗ್ರಾಮೋದ್ಯೋಗ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್.ಜನಾರ್ದನ್, ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಪಿ., ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಶ್ರೀಧರ್ ಭಟ್, ರವೀಂದ್ರ ಶೆಟ್ಟಿ ಬಳಂಜ, ಮೋಹನ್ ಶೆಟ್ಟಿಗಾರ್, ಉದ್ಯಮಿಗಳಾದ ಮೋಹನ್ ಕುಮಾರ್, ರಾಜೇಶ್ ಪೈ, ಅರುಣ್ ಕುಮಾರ್ ಎಂ.ಎಸ್., ಸಂತೋಷ್ ಕುಮಾರ್ ಕಾಪಿನಡ್ಕ, ರವಿ ಚಕಿತ್ತಾಯ, ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಜೈನ್, ವಸಂತ್ ಸುವರ್ಣ, ಶ್ರೀಧರ್ ಕೆ.ವಿ., ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ತಿಮ್ಮಪ್ಪ ಗೌಡ ಬೆಳಾಲು, ಬಿ.ಎ.ರಹಿಮಾನ್, ಪ್ರಮೋದ್ ಕುಮಾರ್ ಜೈನ್, ಕಾಸಿಂ ಮಲ್ಲಿಗೆ ಮನೆ, ಬೆಳ್ತಂಗಡಿ ತಾಲೂಕು ಕಸಾಪ ಅಧ್ಯಕ್ಷ ಯದುಪತಿ ಗೌಡ, ಪುಷ್ಪಾವತಿ ಆರ್.ಶೆಟ್ಟಿ, ಮಮತಾ ಶೆಟ್ಟಿ, ಅವಿನಾಶ್ ರಾವ್, ಗಣೇಶ್ ಇಂಜಿನಿಯರ್, ಬಿ.ಕೆ.ಧನಂಜಯ ರಾವ್, ರಾಜಶೇಖರ್ ಅಜ್ರಿ, ಸೀತಾರಾಮ್, ಶ್ರೀಧರ್ ರಾವ್, ಶ್ರೀನಿವಾಸ್ ಗೌಡ ಪಟ್ರಮೆ, ರತ್ನವರ್ಮ ಜೈನ್, ಗುರುಪ್ರಸಾದ್, ಪುಷ್ಪರಾಜ್ ಜೈನ್, ಈಶ್ವರ ಬೈರ, ಸತೀಶ್ ಕಾಮತ್ ಕೊಲ್ಲಿ, ವಸಂತ್ ಭಟ್ ನಾರಾವಿ, ಡಾ.ಪ್ರದೀಪ್ ಕುಮಾರ್ ನಾವೂರು, ಲಕ್ಷ್ಮಣ್ ಸಫಲ್ಯ, ಕಿರಣ್‌ಚಂದ್ರ ಪುಷ್ಪಗಿರಿ ಮತ್ತಿತರರು ಉಪಸ್ಥಿತರಿದ್ದರು.