ಗ್ರಾಮದ ಅಭಿವೃದ್ಧಿಗೆ ಅಡ್ಡಿಯಾದರೆ ಸಂಘಟಿತ ಹೋರಾಟ

ಶಿರ್ಲಾಲು ಗ್ರಾಪಂನಲ್ಲಿ ವಿಶೇಷ ಗ್ರಾಮಸಭೆ
ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಗ್ರಾಮಸಭೆ ಶಿರ್ಲಾಲು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಎಂ.ಕೆ.ಪ್ರಸಾದ್, ಮಂಜುನಾಥ್, ಜಗನ್ನಾಥ ಅಂತ್ರಾಂಗೆ ಮೊದಲಾದವರಿದ್ದರು
ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಗ್ರಾಮಸಭೆ ಶಿರ್ಲಾಲು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಎಂ.ಕೆ.ಪ್ರಸಾದ್, ಮಂಜುನಾಥ್, ಜಗನ್ನಾಥ ಅಂತ್ರಾಂಗೆ ಮೊದಲಾದವರಿದ್ದರು
Published on

ಬೆಳ್ತಂಗಡಿ: ಇತ್ತೀಚೆಗೆ ಕಸ್ತೂರಿ ರಂಗನ್ ವರದಿಯ ವಿಶೇಷ ಗ್ರಾಮಸಭೆಗೆ ಅನೇಕ ಇಲಾಖೆ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಸಂತ್ರಸ್ತರ ತೀವ್ರ ಆಕ್ರೋಶಕ್ಕೆ ಒಳಗಾಗಿ ರದ್ದುಗೊಂಡಿದ್ದ ಶಿರ್ಲಾಲು ಗ್ರಾಮಸಭೆ ಬುಧವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ತಾಲೂಕು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಹ ಸಂಚಾಲಕ ಎಂ.ಕೆ.ಪ್ರಸಾದ್ ಮಾತನಾಡಿ, ಗ್ರಾಮದ ಭೌಗೋಳಿಕ ಮತ್ತು ವಾಸ್ತವ ಪರಿಸ್ಥಿತಿ ಪರಿಗಣಿಸದೆ ಗ್ರಾಮದ ಯಾವುದೇ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸಬಾರದು. ಕೃಷಿ ಚಟುವಟಿಕೆ, ಮನೆ ನಿರ್ಮಾಣ, ರಸ್ತೆ, ಸೇತುವೆ, ವಿದ್ಯುತ್, ಶಾಲೆ, ಆಸ್ಪತ್ರೆ ಸೇರಿದಂತೆ ಗ್ರಾಮದ ಯಾವುದೇ ರೀತಿಯ ಅಭಿವೃದ್ಧಿಗೆ ವರದಿ ಅನುಷ್ಠಾನದಿಂದ ತೊಂದರೆಯಾದರೆ ಸಂಘಟಿತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಶ್ವನಾಥ ಬಂಗೇರ ಮಾತನಾಡಿ, ಶಿರ್ಲಾಲು ಗ್ರಾಮದ ಒಂದೇ ಒಂದು ಮನೆಗೆ ಸಮಸ್ಯೆಯಾದರೂ ಜೀವದ ಹಂಗು ತೊರೆದು ಪ್ರತಿಭಟಿಸುತ್ತೇವೆ ಎಂದರು.

ಆಡಳಿತಾಧಿಕಾರಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಗನ್ನಾಥ ಅಂತ್ರಾಂಗೆ, ರಮೇಶ್ಕ್, ಹಷರ್ ಆರ್.ಜೈನ್, ಮಾಧವ ಶಿರ್ಲಾಲು, ರಮಾನಂದ ಗುಡ್ಡಾಜೆ, ಚಿದಾನಂದ ಎಲ್ದಕ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮಸ್ಥರ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಯಿತು. ವೇಣೂರು ವಲಯ ಸಹಾಯಕ ಅರಣ್ಯಾಧಿಕಾರಿ ಹರಿಪ್ರಸಾದ್, ಕಸ್ತೂರಿ ರಂಗನ್ ವರದಿಯ ಬಗ್ಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆ ತಿಳಿಸಿದರು.

ಗ್ರಾಮಾಡಳಿತಾಧಿಕಾರಿ ವಿಜೇತ್ ಅಮಿನ್, ಗ್ರಾಮ ಪೊಲೀಸ್ ಅಧಿಕಾರಿ ಬೀರಪ್ಪ, ಶಿರ್ಲಾಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ಸಣಕಲ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೋನಮ್ಮ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net