ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ವಿರೋಧ

ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಮೆನ್ನಬೆಟ್ಟು ಗ್ರಾಮಸ್ಥರು
ಮೆನ್ನಬೆಟ್ಟುವಿನಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣ ವಿರೋಧಿಸಿ ಗ್ರಾಮಸ್ಥರಿಂದ ಸಭೆ ನಡೆಯಿತು. ವಾರ್ಡ್ ಸದಸ್ಯೆ ಕೋಕಿಲ್ ಡಿ ಅಮೀನ್, ಸ್ಥಳೀಯ ನಿವಾಸಿ ಹರೀಶ್, ಪ್ರಕಾಶ್ ಆಚಾರ್ ಮೊದಲಾದವರಿದ್ದರು.
ಮೆನ್ನಬೆಟ್ಟುವಿನಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣ ವಿರೋಧಿಸಿ ಗ್ರಾಮಸ್ಥರಿಂದ ಸಭೆ ನಡೆಯಿತು. ವಾರ್ಡ್ ಸದಸ್ಯೆ ಕೋಕಿಲ್ ಡಿ ಅಮೀನ್, ಸ್ಥಳೀಯ ನಿವಾಸಿ ಹರೀಶ್, ಪ್ರಕಾಶ್ ಆಚಾರ್ ಮೊದಲಾದವರಿದ್ದರು.
Published on: 

ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೆನ್ನಬೆಟ್ಟುವಿನಲ್ಲಿ ನಿರ್ಮಾಣ ಹಂತದಲ್ಲಿರುವ ಮಲತ್ಯಾಜ್ಯ ಘಟಕದಿಂದ ಸಾರ್ವಜನಿಕರಿಗೆ ಸಮಸ್ಯೆ ನಿರ್ಮಾಣವಾಗಲಿದೆ. ಇದನ್ನು ನಿಲ್ಲಿಸದಿದ್ದರೆ ಮುಂದಕ್ಕೆ ತೀವ್ರ ಹೋರಾಟ ಮಾಡಲಾಗುವುದು ಎಂದು ನಿರ್ಮಾಣ ಹಂತದಲ್ಲಿರುವ ಘಟಕದ ವಠಾರದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು ಬರುವ ಮೊದಲು ಘಟಕ ಆರಂಭಿಸಲಾಗಿದೆ. ಆಗ ಅಧಿಕಾರಲ್ಲಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಆರೋಗ್ಯ ಅಧಿಕಾರಿಗಳು ಇಲ್ಲಿನ ಗ್ರಾಮದ ಜನರಿಂದ ಯಾವ ಘಟಕ ಆಗುತ್ತದೆ ಎಂಬ ವಿಷಯವನ್ನು ಮುಚ್ಚಿಟ್ಟು ಗ್ರಾಮಸ್ಥರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದೆ ಅವರದ್ದೇ ನಿರ್ಣಯದಂತೆ ಘಟಕ ಕಾಮಗಾರಿ ನಡೆದಿದೆ. ನಮಗೆ ಯಾವ ಮಾಹಿತಿಯೂ ನೀಡಿಲ್ಲ, ಪತ್ರಿಕೆಯಲ್ಲಿ ವರದಿ ಬಂದ ಬಳಿಕ ಗೊತ್ತಾಯಿತು ಎಂದು ಹರೀಶ್ ತಿಳಿಸಿದರು.

ವಾರ್ಡ್ ಸದಸ್ಯರಾದ ಕೋಕಿಲ್ ಡಿ ಅಮೀನ್, ಪ್ರಕಾಶ್ ಆಚಾರ್, ಚಂದ್ರ ರಾಣ್ಯ, ಸುನೀತಾ ರೋಡ್ರಿಗಸ್, ಸುನೀಲ್ ಆಳ್ವ ಸಮಸ್ಯೆ ಬಗ್ಗೆ ವಿವರಣೆ ನೀಡಿದರು. ಪಕ್ಕದ ಶಾಲೆಯ ಪಾಲಕರ ಸಮಿತಿಯ ಸಂದೀಪ್ ಶೆಟ್ಟಿ ಅವರನ್ನು ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಚರ್ಚ್ ಸಮಿತಿಯ ಲ್ಯಾನ್ಸಿ, ಲೈನಲ್ ಪಿಂಟೋ, ಪ್ರವೀಣ್, ಸುದರ್ಶನ್, ಲಕ್ಷ್ಮಣ್ ಕುಕ್ಯಾನ್, ಲ್ಯಾನ್ಸಿ ಡಿಸೋಜ, ಚರ್ಚ್ ಕಮಿಟಿಯ ವಿಲಿಯಂ, ಲೈನಲ್ ಪಿಂಟೋ, ವಾರ್ಡ್ ಗುರಿಕಾರರಾದ ಹಿಲ್ಡಾ ಡಿಸೋಜ, ಲ್ಯಾನ್ಸಿ ಪಿರೇರಾ, ಪದ್ಮಿನಿ , ಶಾಂತಾ, ಚಂದ್ರಿಕಾ, ಪೌಲಿನ್, ಲ್ಯಾನ್ಸ್ ಲೋಬೋ, ಶ್ರೀನಿವಾಸ, ನೆಲ್ಸನ್, ರೂಡಿ ಜಾನ್ಸನ್, ಪ್ರತಿಮಾ, ಉದಯ, ದಿವ್ಯಾ, ಪರಿಸರದ ಮೆರಿವೆಲ್ ಕಾನ್ವೆಂಟಿನ ಭಗಿನಿಯರು, ಶಾಲಾ ಸಮಿತಿಯ ಪಾಲಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದು ತಗ್ಗು ಪ್ರದೇಶವಾಗಿದ್ದು ನೀರಿನ ಒರತೆಯಿದೆ. ತ್ಯಾಜ್ಯದ ಮಲಿನ ನೀರು ಪಕ್ಕದ ತೋಟ, ಬಾವಿಗಳಿಗೆ ಸೇರಿಕೊಳ್ಳುತ್ತಿದೆ. 50ಕ್ಕೂ ಹೆಚ್ಚು ಮನೆ, 5 ಶಾಲೆಗಳು, ಚರ್ಚ್ ಇಲ್ಲಿದೆ. ಈ ಜಾಗ ತ್ಯಾಜ್ಯ ಘಟಕ ಮಾಡಲು ಯೋಗ್ಯ ಅಲ್ಲ. ಮೊದಲಿನಿಂದಲೂ ನಾವು ವಿರೋಧ ಮಾಡಿದ್ದೇವೆ. ನಮ್ಮ ಮಾತುಗಳನ್ನು ಯಾರೂ ಕೇಳುವುದಿಲ್ಲ.
ಕೋಕಿಲ್ ಡಿ.ಅಮೀನ್, ವಾರ್ಡ್ ಸದಸ್ಯೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net