ಸ್ವಚ್ಛತೆ ನಮ್ಮ ಸಂಸ್ಕೃತಿಯಾಗಲಿ : ಶೀನ ಶೆಟ್ಟಿ ಆಶಯ

 ಒಳಮೊಗ್ರು ಗ್ರಾಮ ಪಂಚಾಯಿತಿಗೆ ಸ್ವಚ್ಛತಾ ಜಿಲ್ಲಾ ರಾಯಭಾರಿಗಳಾದ ಶೀನ ಶೆಟ್ಟಿ ಮತ್ತು ಕೃಷ್ಣಮೂಲ್ಯ ಅವರು ಭೇಟಿ ನೀಡಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಒಳಮೊಗ್ರು ಗ್ರಾಮ ಪಂಚಾಯಿತಿಗೆ ಸ್ವಚ್ಛತಾ ಜಿಲ್ಲಾ ರಾಯಭಾರಿಗಳಾದ ಶೀನ ಶೆಟ್ಟಿ ಮತ್ತು ಕೃಷ್ಣಮೂಲ್ಯ ಅವರು ಭೇಟಿ ನೀಡಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
Published on

ಪುತ್ತೂರು ಗ್ರಾಮಾಂತರ: ಎಲ್ಲೆಂದರಲ್ಲಿ ಕಸ ಬಿಸಾಡುವ ಮತ್ತು ಸುಡುವ ಅಭ್ಯಾಸವನ್ನು ಬಿಡುವ ಮೂಲಕ ಪ್ರತಿಯೊಬ್ಬರೂ ಸ್ವಚ್ಛತೆಯ ಅಗತ್ಯ ಮತ್ತು ಮಹತ್ವವನ್ನು ಅರಿತುಕೊಳ್ಳಬೇಕು. ಆರೋಗ್ಯಕರ ನೈರ್ಮಲ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಚ್ಛತೆ ನಮ್ಮ ಸಂಸ್ಕೃತಿಯಾಗಬೇಕು ಎಂದು ಸ್ವಚ್ಛತಾ ಜಿಲ್ಲಾ ರಾಯಭಾರಿ ಶೀನ ಶೆಟ್ಟಿ ಹೇಳಿದರು.

ಕಸಮುಕ್ತ ಮನೆ, ಕಸ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಪ್ನಾದೇಶ್ ಮಾದರಿ ಗ್ರಾಮ ಅಭಿಯಾನದಲ್ಲಿ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ, ಸ್ವಚ್ಛತಾ ಜಿಲ್ಲಾ ರಾಯಭಾರಿ ಶೀನ ಶೆಟ್ಟಿ ಮತ್ತು ಕೃಷ್ಣಮೂಲ್ಯ ಅವರು ಗುರುವಾರ ಒಳಮೊಗ್ರು ಗ್ರಾಪಂಗೆ ಭೇಟಿ ನೀಡಿ ಪಂಚಾಯಿತಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಕೃಷ್ಣ ಮೂಲ್ಯ ಮಾತನಾಡಿ, ಎಲ್ಲರೂ ಸಹಕಾರ ನೀಡಿದರೆ ಗ್ರಾಮವನ್ನು ಕಸ ಮುಕ್ತ ಗ್ರಾಮವನ್ನಾಗಿಸುವುದು ದೊಡ್ಡ ವಿಷಯವಲ್ಲ. ಆರಂಭದಲ್ಲಿ ನಮ್ಮ ಮನೆ ಕಸಮುಕ್ತವಾಗಬೇಕು. ಸ್ವಚ್ಛ ಮನೆ, ಸ್ವಚ್ಛ ಗ್ರಾಮ, ಸ್ವಚ್ಛ ನಗರ ನಿರ್ಮಾಣ ಮತ್ತು ನಿರಂತರ ಕಸ ನಿರ್ವಹಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ಮಹೇಶ್ ರೈ ಕೇರಿ, ಪ್ರದೀಪ್ ಸೇರ್ತಾಜೆ, ಲತೀಫ್ ಕುಂಬ್ರ, ಚಿತ್ರಾ ಬಿ.ಸಿ., ಶಾರದಾ ಆಚಾರ್ಯ, ರೇಖಾ ಯತೀಶ್, ಸುಂದರಿ ಪರ್ಪುಂಜ, ನಳಿನಾಕ್ಷಿ, ವನಿತಾ ಕುಮಾರಿ, ಪಂಚಾಯಿತಿ ಕಾರ್ಯದರ್ಶಿ ಜಯಂತಿ ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ಸುರೇಶ್ ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net