ಮನಸ್ಸು ಮುಟ್ಟುವ ಭಾವಪೂರ್ಣ ಸಾಹಿತ್ಯ ODIYOORU

ಒಡಿಯೂರು ಶ್ರೀ ಆಶೀರ್ವಚನ | ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನ ಸಮಾರೋಪ
odiyooru sammelana
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಸಮ್ಮೇಳನಾಧ್ಯಕ್ಷೆ ಸಾನ್ವಿ ಚೆಂಬರ್ಪು ಅವರನ್ನು ಸನ್ಮಾನಿಸಿದರು. ಸಾಧ್ವಿ ಮಾತಾನಂದಮಯೀ, ಸೇರಾಜೆ ಗಣಪತಿ ಭಟ್, ರೇಣುಕಾ ಎಸ್.ರೈ, ರಮೇಶ್ ಎಂ.ಬಾಯಾರು, ತಾರಾನಾಥ್ ಕೈರಂಗಳ ಮತ್ತಿತರರು ಉಪಸ್ಥಿತರಿದ್ದರು.
Published on: 

ವಿಟ್ಲ: ಭಾಷೆ ಸಂಸ್ಕೃತಿಯ ಹೃದಯ. ಸಾಹಿತಿಯ ಹೃದಯದಲ್ಲಿ ತುಂಬಿದ ವಿಚಾರ, ಆಲೋಚನೆಗಳು ಸಾಹಿತ್ಯವಾಗಿ ಹೊರಬರುತ್ತದೆ. ಭಾವ ತುಂಬಿದ ಸಾಹಿತ್ಯಗಳು ಮನವನ್ನು ಮುಟ್ಟುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಽಕಾರಿ ಮಾಲತಿ ಕಾನತ್ತಡ್ಕ ಅತಿಥಿಯಾಗಿದ್ದರು. ಸಾಽ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ಸಾನ್ವಿ ಚೆಂಬರ್ಪು ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್, ಮುಖ್ಯಶಿಕ್ಷಕಿ ರೇಣುಕಾ ಎಸ್.ರೈ, ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ್ ಎಂ.ಬಾಯಾರು, ಮಕ್ಕಳ ಜಗಲಿ ಡಿಜಿಟಲ್ ಪತ್ರಿಕೆ ಸಂಸ್ಥಾಪಕ ತಾರಾನಾಥ್ ಕೈರಂಗಳ ಮತ್ತಿತರರು ಉಪಸ್ಥಿತರಿದ್ದರು.

ಒಡಿಯೂರು ಶಾಲೆಯ ಸಿ.ಎಚ್.ಸಾನ್ವಿ ಸ್ವಾಗತಿಸಿದರು. ಅಜಿತ್ ಶೆಟ್ಟಿ ವಂದಿಸಿದರು. ಕಲ್ಲಡ್ಕ ಶಾಲೆಯ ಸುಶ್ಮಿತಾ ಭಟ್ ಸನ್ಮಾನ ಪತ್ರ ವಾಚಿಸಿದರು. ಧಾತ್ರಿ ಕಾರ್ಯಕ್ರಮ ನಿರ್ವಹಿಸಿದರು.

ಗಮಕ ವಾಚನ, ಗಾಯನ

ಒಡಿಯೂರು ಶಾಲೆಯ ಸಾನ್ವಿ ಶೆಟ್ಟಿ, ಚರಿಷ್ಮ ಗಮಕ ವಾಚನ ಮಾಡಿದರು. ಕಲ್ಲಡ್ಕ ಶಾಲೆಯ ಕಾರುಣ್ಯ ಎನ್., ಜೇಸೀಸ್ ಶಾಲೆಯ ಮನಸ್ವಿ ಆರ್.ಕೆ. ವ್ಯಾಖ್ಯಾನ ಮಾಡಿದರು. ಒಡಿಯೂರು ಶಾಲೆಯ ರೋಹನ್ ಆರ್.ಸ್ವಾಗತಿಸಿದರು. ಕವನ್ ಡಿ. ವಂದಿಸಿದರು. ಮಂಚಿ ಕೊಳ್ನಡು ಶಾಲೆಯ ಮನ್ವಿತಾ ಕಾರ್ಯಕ್ರಮ ನಿರೂಪಿಸಿದರು. ಗಾಯನ ಕಾರ್ಯಕ್ರಮದಲ್ಲಿ ಜೇಸೀಸ್ ಶಾಲೆಯ ಸೌಜನ್ಯಾ ಎಸ್.ಜೈನ್, ಆರುಷ್ ಟಿ.ಭಟ್, ಆತ್ಮಿಕಾ ಗೌರಿ, ಅಳಿಕೆ ಶಾಲೆಯ ಮಾ ಶಾಂತಿ ಮೂಲೆ, ಪ್ರಮಾ ಶಾಂತಿಮೂಲೆ, ಒಡಿಯೂರು ಶಾಲೆಯ ಯಶಿಕಾ ಪಿ.ಶೆಟ್ಟಿ, ಪ್ರಣವಿ, ಪಿಎಂ ಶ್ರೀ ಶಾಲೆಯ ಧ್ರುವಿ ಶೆಟ್ಟಿ, ಕಲ್ಲಡ್ಕ ಶಾಲೆಯ ಶರಣ್ಯ, ಮೂಡಂಬೈಲು ಶಾಲೆಯ ಅರ್ಚನ್ ಗಾಯನ ಮಾಡಿದರು. ಒಡಿಯೂರು ಶಾಲೆಯ ಜನ್ಯಾ ಬಿ. ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನದ ಮೂಲಕ ತಾಲೂಕಿನ ಎಲ್ಲ ಮಕ್ಕಳು ಆನಂದವನ್ನು ಉಣಬಡಿಸಿದ್ದಾರೆ. ಒಡಿಯೂರು ಕ್ಷೇತ್ರದಿಂದ ಸಮಾಜಕ್ಕೆ ಹಿತವಾಗುವ ಕಾರ್ಯವನ್ನು ನಡೆಸಿಕೊಂಡುಬರಲಾಗುತ್ತಿದೆ. ಮಕ್ಕಳು ವಿದ್ಯಾವಂತರಾಗುವ ಜತೆಗೆ ಪ್ರಜ್ಞಾವಂತ ವ್ಯಕ್ತಿಗಳಾಗುವ ಅಗತ್ಯವಿದೆ. ಪ್ರತಿಭಾನ್ವಿತ ಮಕ್ಕಳು ದೇಶದ ಆಸ್ತಿಯಾಗಿದ್ದಾರೆ. ಮಕ್ಕಳಿಗೆ ಸೂರ್ತಿ ತುಂಬಬೇಕಾಗಿದೆ.
ಸಾಧ್ವಿ ಮಾತಾನಂದಮಯೀ, ಒಡಿಯೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net