ಸ್ಪರ್ಧೆಗಳಿಂದ ಸುಪ್ತ ಪ್ರತಿಭೆ ಅನಾವರಣ ODIYOORU

ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ | ವಿದ್ಯಾಪೀಠ ರಜತ ಸಂಭ್ರಮ
odiyooru rajata
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ರಜತ ಸಂಭ್ರಮದ ಸ್ಪರ್ಧೆಗಳನ್ನು ಉದ್ಘಾಟಿಸಿ ಒಡಿಯೂರು ಶ್ರೀ ಗುರುದೇದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಧ್ವಿ ಮಾತಾನಂದಮಯೀ, ತೀರ್ಪುಗಾರರಾದ ರಮೇಶ್ ಬಾಯಾರು, ಪ್ರೊ.ಪಿ.ಎನ್.ಮೂಡಿತ್ತಾಯ, ತಾರಾನಾಥ ಕೈರಂಗಳ, ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಉಪಸ್ಥಿತರಿದ್ದರು.
Published on: 

ವಿಟ್ಲ: ಜೀವನವೇ ಒಂದು ಸ್ಪರ್ಧೆಯಾಗಿದ್ದು, ಸ್ಪರ್ಧೆಗಳಿಂದ ಸುಪ್ತ ಪ್ರತಿಭೆಗಳ ಅನಾವರಣವಾಗುತ್ತದೆ. ಶಿಕ್ಷಕರು ಮತ್ತು ಪಾಲಕರು ವಿದ್ಯಾರ್ಥಿ ಎಂಬ ನಾಣ್ಯದ ಎರಡು ಮುಖಗಳಾಗಿದ್ದು, ಇಬ್ಬರಿಂದಲೂ ಪ್ರೋತ್ಸಾಹ ದೊರೆತಾಗ ಪ್ರತಿಭೆಗಳು ಪ್ರಕಾಶಕ್ಕೆ ಬರುತ್ತವೆ. ವಿದ್ಯೆಯಿಂದ ಜ್ಞಾನವನ್ನು ಗಳಿಸಿಕೊಂಡು ವಿನಯವನ್ನು ಮೈಗೂಡಿಸಿದಾಗ ಅಮೃತತ್ವ ಪ್ರಾಪ್ತಿಯಾಗುತ್ತದೆ ಎಂದು ಒಡಿಯೂರು ಶ್ರೀಗುರುದೇದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ರಜತ ಸಂಭ್ರಮದ ಪ್ರಯುಕ್ತ ತಾಲೂಕುಮಟ್ಟದ ಸ್ಪರ್ಧೆಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಾಧ್ವಿ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿವಿಧ ವೇದಿಕೆಗಳಲ್ಲಿ ಶಾಲಾ ಶಿಕ್ಷಕ-ಶಿಕ್ಷಕಿಯರ ನಿರ್ವಹಣೆಯೊಂದಿಗೆ ಚಿತ್ರಕಲೆ, ಪ್ರಬಂಧ, ಭಾಷಣ,ಕವಿತಾ ರಚನೆ, ಕಥಾ ರಚನೆ, ಭಾವಗೀತೆ ಸ್ಪರ್ಧೆಗಳು ನಡೆದವು. ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದರಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಪ್ರಮುಖ ತೀರ್ಪುಗಾರರಾದ ರಮೇಶ್ ಬಾಯಾರು, ಪ್ರೊ.ಪಿ.ಎನ್.ಮೂಡಿತ್ತಾಯ, ತಾರಾನಾಥ ಕೈರಂಗಳ, ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ರೇಣುಕಾ ಎಸ್.ರೈ ಸ್ವಾಗತಿಸಿದರು. ಶಾಲಾ ಸಂಚಾಲಕ ಸೇರಾಜೆ ಗಣಪತಿ ಭಟ್ ಪ್ರಸ್ತಾವನೆಗೈದರು. ಶಿಕ್ಷಕ ಮುರಳೀಧರ ವಂದಿಸಿದರು. ಶಿಕ್ಷಕ ಶೇಖರ ಶೆಟ್ಟಿ ಬಾಯಾರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net