ಪಂಬದ ಸಮುದಾಯ ಅಳಿಯ ಕಟ್ಟು ಪ್ರಕಾರ ಯಜಮಾನಿಕೆಯನ್ನು ಹೊಂದಿದ್ದು, ದಿ.ಗಣೇಶ್ ಪಂಬದರ ಪತ್ನಿ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿರುವುದರಿಂದ ನಿಯಮ ಪ್ರಕಾರ ಅವರ ಪುತ್ರನಿಗೆ ನೇಮ ಕಟ್ಟಲು ಆಗುವುದಿಲ್ಲ. ಈ ಬಗ್ಗೆ ದೈವಸ್ಥಾನದ ಆಡಳಿತ ಸಮಿತಿಯವರಲ್ಲಿ ವಿಚಾರಿಸಿದಾಗ ಅವರಿಗೂ ಮಾಹಿತಿ ಇರಲಿಲ್ಲ. ಈ ವಿಚಾರ ತಿಳಿದ ಅವರು ಮುಂದಿನ ವರ್ಷದಿಂದ ಬಾಯಾರು ಗಣೇಶ ಪಂಬದನನ್ನು ಮುಂದಿನ ವರ್ಷದಿಂದ ನೇಮದ ಸೇವೆಗೆ ಬಳಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಈ ವಿಚಾರವಾಗಿ ಬಾಯಾರಿನ ಗಣೇಶ ಮತ್ತು ಸೂರಜ್‌ನನ್ನು ಪ್ರಶ್ನಿಸಿದಾಗ ಅವರು ಉಡಾಫೆಯಿಂದ ಮಾತನಾಡಿದ್ದಾರೆ ಎಂದರು.