_1767877589841.webp?w=480&auto=format%2Ccompress&fit=max)
_1767877589841.webp?w=480&auto=format%2Ccompress&fit=max)
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಎನ್ನೆಸ್ಸೆಸ್ ಘಟಕ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಪ್ತದಿನ ಸಹವಾಸ ಶಿಬಿರ ಗುರುವಾರ ಸಮಾರೋಪಗೊಂಡಿತು.
ಹೈಯರ್ ಸೆಕೆಂಡರಿ ಶಾಲಾ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ವಹಿಸಿದ್ದರು. ಗ್ರಾ.ಪಂ. ಸದಸ್ಯ ಸುಧಾಕರ ಉದ್ಘಾಟಿಸಿದರು. ನಿವೃತ್ತ ಅಧ್ಯಾಪಕ ಸದಾನಂದ ಕುದ್ವ, ಪಿಟಿಎ ಅಧ್ಯಕ್ಷ ಸುಧಾಕರ ಕಲ್ಲಗದ್ದೆ, ಉಪಾಧ್ಯಕ್ಷ ಶ್ಯಾಮ ಸುಂದರ್, ಎಸ್.ಎಸ್.ಜಿ. ಅಧ್ಯಕ್ಷ ಬಟ್ಯ, ಎಸ್.ಎಂ.ಸಿ. ಸದಸ್ಯ ನಾರಾಯಣ, ವಿಷ್ಣು ಭಟ್ ಬಾಳೆಮೂಲೆ, ಆಡಳಿತ ಸಮಿತಿಯ ಲೋಕನಾಥ ಶೆಟ್ಟಿ ಮಾಯಿಲೆಂಗಿ, ನಿವೃತ್ತ ವಾಯು ಸೇನಾಧಿಕಾರಿ ನರಸಿಂಹ ಭಟ್, ಸುನೀಲ್ ಕೆಂಗಣಾಜೆ, ಪ್ರಸಾದ ರೈ ಮುಂಗ್ಲಿಕಾನ, ಮಹಾಲಿಂಗ, ಹರೀಶ್, ಸುರೇಶ್, ಪ್ರಭಾಕರ ರೈ, ಶಶಿಕುಮಾರ್ ಶೆಟ್ಟಿ, ರವಿ, ನಾರಾಯಣ ನಾಯ್ಕ, ಗಗನ ರಾಜ್ ಮತ್ತು ಗ್ರೀಷ್ಮಾ, ಶಿಕ್ಷಕಿ ಅಕ್ಷತಾ ಭಟ್ ಮೊದಲಾದವರಿದ್ದರು.
ಬಾಳೆಮೂಲೆ ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಬಿ.ಸ್ವಾಗತಿಸಿದರು. ಕಾಟುಕುಕ್ಕೆ ಶಾಲಾ ಶಿಕ್ಷಕ ಶ್ಯಾಮ ನಿರೂಪಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ವಾಣಿ ಕೆ. ವಂದಿಸಿದರು.