ಬಿ.ಸಿ.ರೋಡಿನ ಆಡಳಿತಸೌಧದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಇದೆ. ಇದರ ಮುಂಭಾಗವು ಈಗ ಪಾರ್ಕಿಂಗ್ ವಲಯದಂತಾಗಿದೆ. ಪರಿಣಾಮ ಇಂದಿರಾ ಕ್ಯಾಂಟೀನ್‌ಗೆ ಆಗಮಿಸುವ ಗ್ರಾಹಕರು ಪರದಾಡುವಂತಾಗಿದೆ. ಅದಕ್ಕಾಗಿಯೇ ಕ್ಯಾಂಟೀನ್ ಮುಂಭಾಗದ ಗೇಟ್‌ಗೆ ನೋ ಪಾರ್ಕಿಂಗ್ ಸ್ಥಳ ಎಂದು ಫಲಕವನ್ನು ಸಿಬ್ಬಂದಿ ಅಳವಡಿಸಿದ್ದರೂ, ಬೆಳಗ್ಗೆಯಿಂದ ಸಂಜೆಯವರೆಗೆ ಆಡಳಿತಸೌಧ ಸಹಿತ ವಿವಿಧ ಕಚೇರಿಗಳಿಗೆ ಆಗಮಿಸುವವರು ತನ್ನ ವಾಹನವನ್ನು ಕ್ಯಾಂಟೀನ್ ಮುಂಭಾಗದುದ್ದಕ್ಕೂ ತಾಸುಗಟ್ಟಲೇ ಪಾರ್ಕ್ ಮಾಡಿ ತೆರಳುತ್ತಾರೆ. ಸಂಜೆ 5 ಗಂಟೆ ಬಳಿಕ ಕ್ಯಾಂಟೀನ್ ಪಕ್ಕ ನಿಲುಗಡೆಯಾಗುವ ಫಾಸ್ಟ್‌ಫುಡ್ ವಾಹನಕ್ಕೆ ಬರುವ ಗ್ರಾಹಕರು ತಮ್ಮ ವಾಹನವನ್ನು ಅಲ್ಲಿಯೇ ಪಾರ್ಕ್ ಮಾಡುತ್ತಾರೆ.