

ಶಾಲೆ ಕೊಠಡಿ ಕೊರತೆ ನಿವಾರಣೆಗೆ ವಿಧಾನಸಭೆ ಸ್ಪೀಕರ್ 20 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದಾರೆ. ಶಾಲಾಭಿವೃದ್ಧಿ ಸಮಿತಿಯೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಸ್ಪೀಕರ್ ಹಾಗೂ ಗ್ರಾಪಂ ಸಹಕಾರದಿಂದ ಎಲ್‌ಕೆಜಿ, ಯುಕೆಜಿ ಆರಂಭವಾದ ಮೇಲೆ ಮಕ್ಕಳ ಸಂಖ್ಯೆ ಹೆಚ್ಚಿದೆ. ಆದರೆ ಕಟ್ಟಡ ಹಳೆಯದಾಗಿದ್ದು, ಶೌಚಗೃಹದ ಸಮಸ್ಯೆಯಿಂದಾಗಿ ಪಾಲಕರು ಮಕ್ಕಳನ್ನು ಕಳುಹಿಸಲು ಭಯಪಡುತ್ತಿದ್ದಾರೆ.
ನಮ್ಮ ಶಾಲೆಯಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿದ್ದಾರೆ, ಆದರೆ ಇಲ್ಲಿ ಶೌಚಗೃಹದ ವ್ಯವಸ್ಥೆ ಸರಿಯಿಲ್ಲ. ಆವರಣಗೋಡೆಯಿಲ್ಲದೆ ನಾಯಿಗಳ ಕಾಟ ಹೆಚ್ಚಾಗಿದೆ. ಮಳೆ ಬಂದರೆ ತರಗತಿಗಳು ಸೋರಿ ಪಾಠ ಕೇಳಲು ಕಷ್ಟವಾಗುತ್ತಿದೆ.