ನೆಟ್‌ಬಾಲ್‌ ವಿಜೇತರ ವಿಜಯೋತ್ಸವ

ರಾಷ್ಟ್ರಮಟ್ಟದ ನೆಟ್‌ಬಾಲ್‌ನಲ್ಲಿ ಚಿನ್ನದ ಪದಕ ಗೆದ್ದ ತಂಡದ ಸದಸ್ಯೆಯರಿಗೆ ಸನ್ಮಾನ ನಡೆಯಿತು.
ರಾಷ್ಟ್ರಮಟ್ಟದ ನೆಟ್‌ಬಾಲ್‌ನಲ್ಲಿ ಚಿನ್ನದ ಪದಕ ಗೆದ್ದ ತಂಡದ ಸದಸ್ಯೆಯರಿಗೆ ಸನ್ಮಾನ ನಡೆಯಿತು.
Published on
ಕಾಲೇಜಿನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ತಂಡದ ನಾಯಕಿ ನಿಖಿತಾ ಹಾಗೂ ಸದಸ್ಯರಾದ ಹರ್ಷಿತಾ, ಹೇಮಾ, ಸಂಧ್ಯಾ, ದಿವ್ಯಾ(ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯರು), ಸುಪ್ರಿಯಾ, ದೀಪ್ತಿ(ಎಸ್‌ಡಿಎಂ ಕಾಲೇಜು) ಮತ್ತು ಶ್ರೀರಕ್ಷಾ, ಅನ್ವಿತಾ, ಸಿಂಚನಾ(ಜೈನ್ ಕಾಲೇಜು) ಹಾಗೂ ಅವರ ಪಾಲಕರನ್ನು, ವಿದ್ಯಾರ್ಥಿಗಳ ಸಾಧನೆ ಹಿಂದೆ ಕೆಲಸ ಮಾಡಿರುವ ನವೀನ್ ಹೆಗ್ಡೆ(ಜೈನ್ ಕಾಲೇಜು ದೈಹಿಕ ಶಿಕ್ಷಕ), ಉಪನ್ಯಾಸಕರಾದ ನವೀನ್ ಕೊರೆಯ, ಮಾಧವ ವಿ.ಎನ್., ಪ್ರಕಾಶ್ ಅಂತವಳ್ಳಿ, ಅಪರ್ಣಾ(ತಂಡದ ಮ್ಯಾನೇಜರ್ ಹಾಗೂ ಉಪನ್ಯಾಸಕಿ), ಶಾಂತಾರಾಮ ರೈ(ಪ್ರೌಢಶಾಲಾ ದೈಹಿಕ ಶಿಕ್ಷಕ) ಅವರನ್ನು ಗೌರವಿಸಲಾಯಿತು.
ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಎನ್.ಪದ್ಮಶೇಖರ ಜೈನ್, ಸದಸ್ಯ ನಾಬರ್ಟ್ ಮಥಾಯಿಸ್, ಹಿರಿಯ ಉಪನ್ಯಾಸಕ ಸುಧಾಕರ ಶೆಟ್ಟಿ, ಪ್ರಾಂಶುಪಾಲೆ ಗಾಯತ್ರಿ ಹಾಗೂ ಆಡಳಿತ ಮಂಡಳಿಯ ಪ್ರೇಮನಾಥ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಗಾಯತ್ರಿ ಸ್ವಾಗತಿಸಿ. ಪ್ರೌಢಶಾಲಾ ಮುಖ್ಯಶಿಕ್ಷಕ ವಾಸು ಕೆ.ನಿರೂಪಿಸಿ, ಶಿಕ್ಷಕ ಕೃಷ್ಣ ಸುಭಾಷ್ ಗುಳಕಣ್ಣವರ್ ವಂದಿಸಿದರು.

ಚಿನ್ನದ ಪದಕ ಸಾಧನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net