ಮುಂದಿನ ಪೀಳಿಗೆಗೆ ಕೃಷಿ ಪ್ರಾಮುಖ್ಯತೆ ಅರಿವು : ಕೆ.ದೇವದಾಸ್ ಭಂಡಾರಿ

ರಾಷ್ಟ್ರೀಯ ರೈತ ದಿನಾಚರಣೆಯನ್ನು ಉಳ್ಳಾಲ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಕೆ.ದೇವದಾಸ್ ಭಂಡಾರಿ ಉದ್ಘಾಟಿಸಿದರು.
ರಾಷ್ಟ್ರೀಯ ರೈತ ದಿನಾಚರಣೆಯನ್ನು ಉಳ್ಳಾಲ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಕೆ.ದೇವದಾಸ್ ಭಂಡಾರಿ ಉದ್ಘಾಟಿಸಿದರು.
Published on
ಇಂದು ಭತ್ತದ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕೆಗೆ ಪ್ರಾಮುಖ್ಯತೆ ದೊರಕುತ್ತಿದೆ. ಆದರೆ ಭತ್ತದ ಕೃಷಿ ನಮ್ಮ ಸಂಸ್ಕೃತಿಯೊಂದಿಗೆ ಮಿಳಿತವಾಗಿದೆ. ಈಗ ನೀರಿನ ಲಭ್ಯತೆ ಹಾಗೂ ತಾಂತ್ರಿಕ ಪರಿಣತಿಯೊಂದಿಗೆ ಯುವಜನತೆಗೆ ಭತ್ತದ ಕೃಷಿಯನ್ನು ಪಾರಂಪರಿಕತೆಯೊಂದಿಗೆ ಆಧುನಿಕತೆ ಬಳಸಿಕೊಂಡು ನಡೆಸಲು ಸಾಧ್ಯವಿದೆ. ಇದರೊಂದಿಗೆ ಕೃಷಿಯ ಪ್ರಾಮುಖ್ಯತೆಯನ್ನು ಮುಂದಿನ ಪೀಳಿಗೆ ಅರಿಯಲು ಸಾಧ್ಯವಾಗುತ್ತದೆ ಎಂದು ಉಳ್ಳಾಲ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಕೆ.ದೇವದಾಸ್ ಭಂಡಾರಿ ಹೇಳಿದರು.
ಕೃಷಿ ಇಲಾಖೆ ಬಂಟ್ವಾಳ ಹಾಗೂ ಬಂಟ್ವಾಳ ಮತ್ತು ಉಳ್ಳಾಲ ತಾಲೂಕು ಕೃಷಿಕ ಸಮಾಜ ಆಶ್ರಯದಲ್ಲಿ 5ನೇ ಪ್ರಧಾನಿ ಚೌದರಿ ಚರಣ್ ಸಿಂಗ್ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಮಾವಂತೂರು ಅಧ್ಯಕ್ಷತೆ ವಹಿಸಿದ್ದರು. ಇಲಾಖಾ ಸೌಲಭ್ಯ ಸಂಬಂಧಿಸಿದ ಕೈಪಿಡಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ತಾಲೂಕಿನ 13 ಜನ ರೈತರಿಗೆ ಪಿಎಂ ಕಿಸಾನ್ ಸಮೃದ್ಧಿ ಯೋಜನೆಯಡಿ ಶೇ.90ರ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕ, 4 ರೈತರಿಗೆ ಪವರ್ ಸ್ಪ್ರೇಯರ್, ಮಿನಿಕಿಟ್ ಯೋಜನೆಯಡಿ ಉಚಿತ ಉದ್ದು ದ್ವಿದಳ ಧಾನ್ಯದ ಕಿಟ್ ವಿತರಣೆ, 15 ರೈತರಿಗೆ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಮಣ್ಣು ಆರೋಗ್ಯ ಕಾರ್ಡ್, ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸುವ ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕೃಷಿ ಸಖಿಯರನ್ನು ಅಭಿನಂದಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹರೀಶ್ ಶೆಣೈ ಕೃಷಿ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ತೋಟಗಾರಿಕಾ ಬೆಳೆ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಕಾರ್ಯದರ್ಶಿಗಳಾದ ಉಮರ್ ಮಂಚಿ, ರಮಾನಾಥ ವಿಟ್ಲ, ಸದಸ್ಯ ಪದ್ಮಶೇಖರ್ ಜೈನ್, ಉಳ್ಳಾಲ ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಜೋಸೆಫ್ ಕುಟಿನ್ಹಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಉಪಸ್ಥಿತರಿದ್ದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್. ಸ್ವಾಗತಿಸಿದರು. ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪದ್ಮನಾಭ ರೈ ಪ್ರಸ್ತಾವನೆಗೈದರು. ಕೃಷಿ ಅಧಿಕಾರಿ ನಂದನ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net