ಕೊರಗಜ್ಜ ದೈವಸ್ಥಾನಕ್ಕೆ ಮೈಸೂರು ಒಡೆಯರ್ ಭೇಟಿ

ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದರು.
ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದರು.
Published on

ಸುಬ್ರಹ್ಮಣ್ಯ: ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಶ್ರೀ ಆದಿಮೊಗೇರ್ಕಳ, ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದರು.



ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ದೈವದ ಪೂಜಾರಿ ರಮೇಶ್ ಕಲ್ಲಜಡ್ಕ ಮಹಾರಾಜರಿಗೆ ದೈವದ ಕರಿಗಂಧ ಪ್ರಸಾದ ನೀಡಿದರು. ಮಹಾರಾಜರು ಪ್ರಾರ್ಥನೆ ಮಾಡಿದರು. ಕುಕ್ಕೆ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ದೈವದ ಮಹಿಮೆಯನ್ನು ಮಹಾರಾಜರಿಗೆ ವಿವರಿಸಿದರು.


ಪ್ರಮುಖರಾದ ರತ್ನಾಕರ ಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಮಾನಾಡು, ಭರತ್ ಕಲ್ಲಗದ್ದೆ, ಉಜ್ವಲ್ ಕಜ್ಜೋಡಿ, ವನಿತಾ ಲಕ್ಷ್ಮೀಶ್, ವೀಕ್ಷಾ ಕಲ್ಲಗದ್ದೆ, ರಂಜನ್ ಅಗರಿಕಜೆ, ಜನಾರ್ದನ ಕಲ್ಲಜಡ್ಕ, ಚಂದ್ರಶೇಖರ್ ಕಲ್ಲಜಡ್ಕ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net