ಎಡಪದವಿನ ಧೀರೇಶ್ ಎಂಬುವರು ತನ್ನ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಕುಟುಂಬ ಸಮೇತ ಬಂಟ್ವಾಳದಿಂದ ಎಡಪದವಿಗೆ ಬರುತ್ತಿದ್ದಾಗ ರಾತ್ರಿ 12ರ ಸುಮಾರಿಗೆ ಮೂಲರಪಟ್ಣ ಸೇತುವೆ ಬಳಿ ಕಾರಿನ ಹೆಡ್‌ಲೈಟ್‌ನಲ್ಲಿ ದೋಷ ಕಂಡು ಬಂದಿತ್ತು. ಅಲ್ಲಿಂದ ಮುಂದಕ್ಕೆ ನಂದೊಟ್ಟು ಎಂಬಲ್ಲಿಗೆ ಬರುವಾಗ ಕಾರಿಗೆ ಎದುರಿನಿಂದ ಹೊಗೆ ಬರುತ್ತಿರುವುದು ಕಂಡು ಬಂತು. ಎಲ್ಲರೂ ಇಳಿಯುತ್ತಲೇ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಂಟ್ವಾಳದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಬರುವುದಕ್ಕಿಂತ ಮುಂಚೆ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಕಾರಿನ ಅರ್ಧ ಭಾಗ ಸಂಪೂರ್ಣ ಸುಟ್ಟು ಹೋಗಿದೆ.