ದೇವಸ್ಥಾನದ ಎದುರು ಭಾಗದಲ್ಲಿ ಪಾರ್ಕಿಂಗ್ ಮಾಡಿದ್ದ ಶಿಮಂತೂರು ನಿವಾಸಿ ಕೇಶವ ದೇವಾಡಿಗ ಎಂಬುವರ ರಿಕ್ಷಾದ ಡ್ಯಾಶ್ ಬಾಕ್ಸ್‌ನ ಬೀಗ ಒಡೆದು ಅದರಲ್ಲಿದ್ದ ಸುಮಾರು 10 ಸಾವಿರ ರೂ. ನಗದು ಕಳವು ಮಾಡಲಾಗಿದೆ. ಕೇಶವ ದೇವಾಡಿಗ ಲಕ್ಷ ದೀಪೋತ್ಸವ ಮುಗಿಸಿ ವಾಪಸ್ ಬಂದು ನೋಡಿದಾಗ ಹಣ ಕಳವಾಗಿದೆ. ಕೂಡಲೇ ದೇವಸ್ಥಾನದ ಆಡಳಿತ ಕಚೇರಿಗೆ ದೂರು ನೀಡಿದ್ದು, ದೇವಸ್ಥಾನದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಆಟೋದ ಡ್ಯಾಶ್ ಬಾಕ್ಸ್ ಒಡೆದು ಹಣ ಕಳವು ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಇದೇ ರೀತಿ ಈತ ಹಲವು ವಾಹನಗಳ ಬಳಿ ಹೋಗುತ್ತಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿದ್ದು ಹಣ ಕಳವಾದ ಬಗ್ಗೆ ಕೇಶವ ದೇವಾಡಿಗ ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ.