ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ

 ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲಿಸಿದರು.
ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲಿಸಿದರು.
Published on

ಬೆಳ್ತಂಗಡಿ: ತಾಲೂಕಿನಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲಿಸಿ, ಸಂಕಷ್ಟ ಎದುರಿಸುತ್ತಿರುವ ಕುಟುಂಬಸ್ಥರಿಗೆ ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ನೆರವು ನೀಡಿದರು.

ಗ್ರಾಮದ ಗಾಣದಕೊಟ್ಟಿಗೆ ನಿವಾಸಿ ಗಂಗಾಧರ ಗೌಡ ಎಂಬುವರ ಮನೆ ಬಳಿಯ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿತ್ತು. ಮುಂಡಾಜೆ ಗ್ರಾಮದ ನಿವಾಸಿ ಚೋಮು ನಲಿಕೆ ಎಂಬುವರ ಮನೆ ಭಾರಿ ಮಳೆಗೆ ಕುಸಿದು ಬಿದ್ದಿತ್ತು. ಸತ್ಯನಪಲ್ಕೆ ನಿವಾಸಿ ಯಮುನಾ ಎಂಬುವರ ಮನೆಯೂ ಹಾನಿಯಾಗಿತ್ತು.
ಧರ್ಮಸ್ಥಳ ಗ್ರಾಮ ಕಟ್ಟದ ಬೈಲಿನ ನಾರಾಯಣ ಗೌಡ, ಅನಂತ ಶೆಟ್ಟಿಗಾರ್ ಮನೆ ಹಿಂಬದಿಯ ಗುಡ್ಡ ಕುಸಿದು, ಸಮಸ್ಯೆ ಎದುರಾಗಿತ್ತು. ಮಾಹಿತಿ ಪಡೆದ ಶಾಸಕರು ಹಾನಿಗೊಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಧರ್ಮಸ್ಥಳ ಗ್ರಾಮದ ಎರಡು ಕುಟುಂಬಗಳಿಗೆ ಧನಸಹಾಯದ ಚೆಕ್ ವಿತರಿಸಿ, ಮಳೆ ಹಾನಿ ಪರಿಹಾರ ನೀಡುವ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net