ಶಾಸಕ ಡಾ.ಮಂತರ್ ಗೌಡ ಸಮಾಲೋಚನೆ : ಗ್ರಾಮಸ್ಥರೊಂದಿಗೆ ಸಭೆ ಅಹವಾಲು ಸ್ವೀಕಾರ

ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಕಡಮಕಲ್‌ಗೆ ಭೇಟಿ ನೀಡಿದರು. ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಹರೀಶ್ ಇಂಜಾಡಿ, ಚೇತನ್ ಕಜೆಗದ್ದೆ ಮತ್ತಿತರರಿದ್ದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಕಡಮಕಲ್‌ಗೆ ಭೇಟಿ ನೀಡಿದರು. ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಹರೀಶ್ ಇಂಜಾಡಿ, ಚೇತನ್ ಕಜೆಗದ್ದೆ ಮತ್ತಿತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಬಹು ಬೇಡಿಕೆಯ, ಮಡಿಕೇರಿ, ಗಾಳಿಬೀಡು, ಕಡಮಕಲ್, ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ಬಗ್ಗೆ ಮತ್ತು ಕಡಮಕಲ್ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಹಿನ್ನೆಲೆಯಲ್ಲಿ ಸಮಾಲೋಚನಾ ಸಭೆಯನ್ನು ಮಡಿಕೇರಿ ಶಾಸಕ ಮಂತರ್ ಗೌಡ ಗುರುವಾರ ಸಂಜೆ ಕಡಮಕಲ್‌ನಲ್ಲಿ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ ಸ್ಥಳೀಯರು ಮತ್ತು ಗುತ್ತಿಗಾರು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮದ ನಾಯಕರು, ಗ್ರಾಮಸ್ಥರು ಮಡಿಕೇರಿ, ಗಾಳಿಬೀಡು, ಕಡಮಕಲ್ ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ಅಗತ್ಯತೆ ಮತ್ತು ಕಾನೂನು ತೊಡಕು ನಿವಾರಿಸಿ ದಶಕಗಳ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಪ್ರವೀಣ್ ಮುಂಡೋಡಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಮಡಿಕೇರಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆ.ಕೆ.ಹರಿಪ್ರಸಾದ್, ಪುಷ್ಪಾ ಪುನಚ್ಚ, ತೆಣ್ಣೀರ ಮೈನಾ ಸೇರಿದಂತೆ ಮಡಿಕೇರಿಯ ಮುಖಂಡರು, ಸ್ಥಳೀಯರಾದ ಭವಾನಿಶಂಕರ್ ಪಿಂಡಿಮನೆ, ಸೋಮಶೇಖರ್ ಕಡಮಕಲ್, ಗಣೇಶ್ ಭಟ್ ಇಡ್ಯಡ್ಕ, ಡ್ಯಾನಿ ಯಲದಾಳು, ಶೇಖರ್ ಅಂಬೆಕಲ್ಲು, ರವೀಂದ್ರ ಕುಮಾರ್ ರುದ್ರಪಾದ ಮೊದಲಾದವರಿದ್ದರು.

ಸ್ಥಳೀಯ ನಿವಾಸಿಗಳಿಗೆ ಹಕ್ಕುಪತ್ರ, ಕುಡಿಯುವ ನೀರು, ಮೊಬೈಲ್ ಟವರ್ ನಿರ್ಮಾಣ, ರಸ್ತೆ ಅಭಿವೃದ್ಧಿ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು. ಮಡಿಕೇರಿ- ಗಾಳಿಬೀಡು- ಕಡಮಕಲ್ ಸಂಪರ್ಕ ರಸ್ತೆಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಶ್ರೀ ಮುಂದಿನ ಬಜೆಟ್‌ನಲ್ಲಿ ಅನುದಾನ ಇರಿಸಿ ಈ ಭಾಗದ ಜನರ ಬೇಡಿಕೆ ಈಡೇರಿಸಲಾಗುವುದು.
ಡಾ.ಮಂತರ್ ಗೌಡ ಶಾಸಕ

ಎಸ್.ಯು.ಬಿ:15:03,04:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net