ಎಂಡೋಸಲಾನ್ ಬ್ಯಾರೆಲ್‌ಗಳೆಲ್ಲಿ? NGT

ಮಿಂಚಿಪದವು ಎಂಡೋಸಲ್ಪಾನ್ ವಿಲೇವಾರಿ ಮಾಡಲಾಗಿದೆ ಎಂದು ಹೇಳಿತ್ತಿರುವ ಪಾಳು ಬಾವಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಬಾಬು ವೀಕ್ಷಿಸಿದರು.
ಮಿಂಚಿಪದವು ಎಂಡೋಸಲ್ಪಾನ್ ವಿಲೇವಾರಿ ಮಾಡಲಾಗಿದೆ ಎಂದು ಹೇಳಿತ್ತಿರುವ ಪಾಳು ಬಾವಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಬಾಬು ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತನಿಖೆಗೆ ಎನ್‌ಜಿಟಿ ಆದೇಶ
  • ನ್ಯಾಯಕ್ಕಾಗಿ ಕಾದಿರುವ ೬,೬೦೦ಕ್ಕೂ ಅಧಿಕ ಸಂತ್ರಸ್ತರು

ಪುತ್ತೂರು:ಕೇರಳ ಸರ್ಕಾರ ಮಿಂಚಿಪದವು ಗೇರುತೋಟದ ಬಾವಿಗಳಲ್ಲಿ ಎಂಡೋಸಲಾನ್ ಹೂತು ಹಾಕಿದ ವಿಚಾರಲ್ಲಿ ತನಿಖೆ ನಡೆಸಿದ ರಾಷ್ಟ್ರೀಯ ಹಸಿರು ಪೀಠ ಕಾಣೆಯಾದ ಎಂಡೋ ಬ್ಯಾರಲ್ಗಳ ಬಗ್ಗೆಸಮಗ್ರ ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ.

ಕೇರಳದಪ್ಲಾಂಟೇಶನ್ ಕಾರ್ಪೋರೇಷನ್ ೨೫೮ ಎಂಡೋಸಲಾನ್ ಬ್ಯಾರಲ್ಗಳಲ್ಲಿ ವೈಮಾನಿಕಸಿಂಪಡಣೆಗಾಗಿ ಬಳಸಿರುವ ಬ್ಯಾರಲ್ಗಳ ಬಗ್ಗೆಸರಿಯಾದ ಪುರಾವೆಗಳಿಲ್ಲದ ಬಗ್ಗೆ ನ್ಯಾಯಮಂಡಳಿ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ತಪಾಸಣೆಯಲ್ಲಿ ೨೦ ಬ್ಯಾರಲ್ ಮಾತ್ರಪತ್ತೆಹಚ್ಚಲು ಸಾಧ್ಯವಾಗಿದ್ದು, ಇದು ಬಾವಿಗಳಲ್ಲಿ ಹಾಕಿ ಮುಚ್ಚಿರುವುದು ಸೇರಿದಂತೆ ಅಕ್ರಮ ವಿಲೇವಾರಿಯ ಬಲವಾದ ಅನುಮಾನವನ್ನು ಹುಟ್ಟುಹಾಕುವಂತೆ ಮಾಡಿದೆ.

ಭೂಗರ್ಭಜಲ ಮೇಲ್ವಿಚಾರಣೆಯ ಕೊರತೆ ಹಾಗೂ ಕಾಸರಗೋಡು ಜಿಲ್ಲೆಯ ೪೫ ಸ್ಥಳೀಯಾಡಳಿತ ಪ್ರದೇಶದಲ್ಲಿ,೬೦೦ ಎಂಡೋಸಲಾನ್ ಬಾಧಿತರಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಇನ್ನಷ್ಟು ಎತ್ತಿ ತೋರಿಸುತ್ತಿದೆ. ಕೇರಳ ರಾಜ್ಯ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಗಳನ್ನು ಜಂಟಿಯಾಗಿ ಪರಿಶೀಲಿಸಬೇಕು. ಕಾಣೆಯಾದ ಬ್ಯಾರಲ್ಗಳ ವಿಚಾರ,ಮಣ್ಣು ಮತ್ತು ನೀರಿನ ಮಾಲಿನ್ಯದ ಪ್ರಮಾಣ ಏನು? ಸರಿಪಡಿಸಲು ಯಾವ ಕ್ರಮಗಳನ್ನು ಅನುಸರಿಸಬೇಕೆಂಬ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಕೇರಳ ಪ್ಲಾಂಟೇಶನ್ ಕಾರ್ಪೋರೇಷನ್ಗೆ ನಿರ್ದೇಶನನೀಡಿದ್ದಲ್ಲದೆ, ಎಲ್ಲ ಖರ್ಚು ವೆಚ್ಚಗಳನ್ನು ನಿಗಮವೇ ಭರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಮೂಲಕ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರವೀಂದ್ರನಾಥ್ ಶಾನುಭಾಗ್ ಅವರು ವಕೀಲ ಗೌರವ್ ಕುಮಾರ್ ಬನ್ಸಾಲ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿ, ಕೇರಳ- ಕರ್ನಾಟಕ ಗಡಿ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಅವೈಜ್ಞಾನಿಕ ಮತ್ತು ಅಕ್ರಮವಾಗಿ ಎಂಡೋಸಲಾನ್ ವಿಲೇವಾರಿ ಮಾಡಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

ಎಂಡೋಪೀಡಿತರಿಗೆಆಶಾಕಿರಣ

ಕೇರಳಪ್ಲಾಂಟೇಷನ್ ಕಾರ್ಪೋರೇಷನ್ಗೆ ನಿರ್ದೇಶನನೀಡುವ ಸಂದರ್ಭ ಎಲ್ಲ ವಿಶ್ಲೇಷಣೆಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಅಗತ್ಯವೆನಿಸಿದಲ್ಲಿ ತಜ್ಞ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಅವಕಾಶ ನೀಡಲಾಗಿದೆ. ವರದಿಯನ್ನು ಅರ್ಜಿದಾರರು ಮತ್ತು ವಕೀಲರಿಗೆ ಒದಗಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದು ಎಂಡೋಸಲಾನ್ ಪೀಡಿತರ ಕುಟುಂಬಕ್ಕೆ ಹೊಸ ಆಶಾಕಿರಣವಾಗಿದೆ.

ಹಲವುಬಾವಿಯಲ್ಲಿ ವಿಲೇವಾರಿ?

ಕೇರಳದಮಿಂಚಿಪದವು ಗೇರುತೋಟ ೧೪೧.೭೦ ಹೆಕ್ಟೇರ್ ಭಾಗದಲ್ಲಿಹರಡಿಕೊಂಡಿದ್ದು, ಅಲ್ಲಲ್ಲಿ ಬಾವಿ ನಿರ್ಮಾಣ ಮಾಡಲಾಗಿತ್ತು. ಎಂಡೋಸಲಾನ್ ಬಳಕೆ ನಿಷೇಧ ಮಾಡುತ್ತಿದ್ದಂತೆ ದಾಸ್ತಾನು ಇರಿಸಿದ್ದ ಎಂಡೋಸಲಾನನ್ನು ಬಾವಿಗಳಲ್ಲಿ ವಿಲೇವಾರಿಮಾಡಲಾಗಿದೆ. ಒಂದು ಬಾವಿ ಪತ್ತೆಯಾಗಿದೆಯಾದರೂ ತೋಟದಲ್ಲಿ ಹಲವು ಬಾವಿಗಳಲ್ಲಿ ವಿಲೇವಾರಿ ಮಾಡಿ ಮುಚ್ಚಿರುವ ಆರೋಪ ಕೇಳಿಬಂದಿತ್ತು.

ಸ್ಥಳಪರಿಶೀಲನೆ

ನೆಟ್ಟಣಿಗೆಗ್ರಾಮದ ಮಿಂಚಿಪದವಿನ ಪಾಳುಬಾವಿಯಲ್ಲಿ ಎಂಡೋಸಲಾನ್ ಹೂತಿರುವ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ನೋಟಿಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ೨೦೨೩ರ ಡಿ.೨೮ರಂದು ಭಾರತಒಕ್ಕೂಟ, ಕರ್ನಾಟಕ ಹಾಗೂ ಕೇರಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net