ಪುತ್ತೂರು ಗ್ರಾಮಾಂತರ: ಕೆಲ ದಿನಗಳ ಹಿಂದೆ ಕಡಿದು ಬಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕುರಿಯ ಗ್ರಾಮದ ಬೂಡಿಯಾರ್ ನಿವಾಸಿ ಗಣೇಶ್ ರೈ ಅವರ 3 ಎಕರೆಯಷ್ಟು ಜಾಗದಲ್ಲಿದ್ದ 900ಕ್ಕೂ ಅಧಿಕ ಅಡಕೆ ಗಿಡ ನಾಶವಾಗಿದ್ದು,ಪರಿಹಾರವಾಗಿ ಮೆಸ್ಕಾಂ ಇಲಾಖೆಯಿಂದ 2.50 ಲಕ್ಷ ರೂ.ಪರಿಹಾರ ನೀಡುವುದಾಗಿ ರಾಜ್ಯ ಇಂಧನ ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಘಟನಾ ಸ್ಥಳಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶಿವರಾಮ ಆಳ್ವ, ರಮೇಶ್ ರೈ ಡಿಂಬ್ರಿ, ಯಾಕೂಬ್, ನವೀನ್ ಕುಮಾರ್ ರೈ, ರವಿಪ್ರಸಾದ್ ಶೆಟ್ಟಿ ಇದ್ದರು.