

ಕಡಬ: ಹಳ್ಳಿಗಳಲ್ಲಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಸಿಕ್ಕಂತಾಗುತ್ತದೆ. ಧರ್ಮ ಸಂಟನೆ ಉದ್ದೇಶವಿಟ್ಟುಕೊಂಡ ಕ್ರೀಡಾಕೂಟಗಳಿಂದ ಹಿಂದು ಪರ ಚಿಂತನೆಯ ಯುವ ಸಮೂಹ ಸಂಟಿತವಾಗುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕೊಲ ಗ್ರಾಮದ ಏಣಿತ್ತಡ್ಕ ರಾಜನ್ ಕ್ರೀಡಾಂಗಣದಲ್ಲಿ ಶಿವಾಜಿ ಗೆಳೆಯರ ಬಳಗದ ವತಿಯಿಂದ ಹಿಂದು ಬಾಂಧವರಿಗಾಗಿ ನಡೆದ ಪುರುಷ ಮತ್ತು ಮಹಿಳಾ ಹಗ್ಗ ಜಗ್ಗಾಟ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ನಿರಂಜನ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕೊಲ ಗ್ರಾಪಂ ಸದಸ್ಯೆ ಶಶಿಕಲಾ, ಏಣಿತ್ತಡ್ಕ ಶಿರಾಡಿ ದೈವಸ್ಥಾನದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೊರಂತಾಜೆ, ಗೌರವ ಸಲಹೆಗಾರ ಚಂದ್ರಶೇಖರ್ ಭಟ್ ಕೊರಂತಾಜೆ, ಉತ್ಸವ ಸಮಿತಿ ಅಧ್ಯಕ್ಷ ಬಾಲಕಷ್ಣ ನಾಯ್ಕ ಕೊರಂತಾಜೆ, ಮಹಿಳಾ ಸಮಿತಿ ಅಧ್ಯಕ್ಷೆ ಹರಿಣಾಕ್ಷಿ ಮೊದಲಾದವರಿದ್ದರು. ಹರಿಪ್ರಸಾದ್ ಕಕ್ವೆ ಸ್ವಾಗತಿಸಿದರು. ರಾಮಚಂದ್ರ ನಾಯ್ಕ ವಂದಿಸಿದರು.