ಎಂಸಿಸಿ ಬ್ಯಾಂಕ್ 13 ಕೋಟಿ ರೂ. ಲಾಭ, 25 ಶಾಖೆಗಳ ಗುರಿ

   ಅನಿಲ್ ಲೋಬೊ
ಅನಿಲ್ ಲೋಬೊ
Published on
ಮಂಗಳೂರು: ಮಂಗಳೂರು ಕೆಥೋಲಿಕ್ ಕೋ ಅಪರೇಟಿವ್ (ಎಂಸಿಸಿ) ಬ್ಯಾಂಕ್ 2025-26ನೇ ಸಾಲಿನ ವಿತ್ತೀಯ ವರ್ಷದಲ್ಲಿ 13 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು.
ಬ್ಯಾಂಕ್ ಒಟ್ಟು 1,525 ಕೋಟಿ ರೂ. ಹಾಗೂ ಕಳೆದ ಆರ್ಥಿಕ ವರ್ಷದಲ್ಲಿ 285 ಕೋಟಿ ರೂ. ಒಟ್ಟು ವ್ಯವಹಾರ ವ್ಯವಹಾರ ನಡೆಸಿದೆ. 2018ನೇ ವರ್ಷದಲ್ಲಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ 500 ಕೋಟಿ ರೂ.ಇದ್ದ ಬ್ಯಾಂಕಿನ ಒಟ್ಟು ವ್ಯವಹಾರವು ಕಳೆದ ಏಳೂವರೆ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದು 114 ವರ್ಷದ ಇತಿಹಾಸವಿರುವ ಬ್ಯಾಂಕಿನ ಚರಿತ್ರೆಯಲ್ಲಿಯೇ ದಾಖಲೆಯಾಗಿದೆ ಎಂದವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಟ್ಟು ವ್ಯವಹಾರದಲ್ಲಿ ಶೇ.23 ವೃದ್ಧಿ ಸಾಧಿಸಿದೆ. 872.88 ಕೋಟಿ ರೂ.ಠೇವಣಿಗಳನ್ನು ಹೊಂದಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಶೇ.23.74 ಏರಿಕೆ ಕಂಡಿದೆ. 652.06 ಕೋಟಿ ರೂ. ಸಾಲ ನೀಡಿದ್ದು, ಶೇ.21.79 ವೃದ್ಧಿ ಸಾಧಿಸಿದೆ. ದುಡಿಯುವ ಬಂಡವಾಳ 1008.97 ಕೋಟಿ ರೂ. (ಶೇ.21.52 ವೃದ್ಧಿ) ಮತ್ತು ಷೇರು ಬಂಡವಾಳ 34.08 ಕೋಟಿ ರೂ. ಆಗಿದೆ. ಒಟ್ಟು ಎನ್‌ಪಿಎ ಪ್ರೊವಿಷನ್ ಕವರೆಜ್ ಅನುಪಾತ ಶೇ.68.87 ಆಗಿದೆ. ಬ್ಯಾಂಕಿನ ಸಿಆರ್‌ಎಆರ್ ಕಳೆದ ಮಾ.31ರ ವೇಳೆಗೆ ಶೇ.17 ಆಗಿದ್ದು, ನಿಗದಿಪಡಿಸಿದ ಶೇ.12.00 ಮಾನದಂಡಕ್ಕಿಂತ ಹೆಚ್ಚಾಗಿದೆ ಎಂದರು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರೂ ಡಿಸೊಜ, ಡಾ.ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೊಜ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೊಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೊಜ, ಆಲ್ವಿನ್ ಪಿ.ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂದಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net