

ಬೆಳ್ತಂಗಡಿ: ತಾಲೂಕಿನ ಪ್ರಖ್ಯಾತ ವಾಣಿಜ್ಯ ಸಂಸ್ಥೆ ಸುವರ್ಣ ಆರ್ಕೇಡ್ನ ಸಹ ಸಂಸ್ಥೆಯಾದ ನೂತನ ಸುವರ್ಣ ರೆಸಾರ್ಟ್ ಧರ್ಮಸ್ಥಳದ ಕನ್ಯಾಡಿಯಲ್ಲಿ ಶುಭಾರಂಭಗೊಂಡಿತು.
ರೆಸಾರ್ಟ್ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ರಾಮಕ್ಷೇತ್ರ ಕನ್ಯಾಡಿಯ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರಾಮಕ್ಷೇತ್ರ ಕನ್ಯಾಡಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುವರ್ಣ ರೆಸಾರ್ಟ್ ಆರಂಭಿಸಿರುವುದು ಸಂತಸದ ವಿಚಾರ. ಇಲ್ಲಿ ವಾಸ್ತವ್ಯ ಹೂಡುವ ಅತಿಥಿಗಳಿಗೆ ಗುಣಮಟ್ಟದ ಆತಿಥ್ಯ ಹಾಗೂ ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆ ಗ್ರಾಹಕರ ವಿಶ್ವಾಸ ಗಳಿಸಲಿ. ಸೇವಾ ಮನೋಭಾವದೊಂದಿಗೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಾ ಮತ್ತಷ್ಟು ಬೆಳಗಲಿ ಎಂದರು.
ಸುವರ್ಣ ರೆಸಾರ್ಟ್ನ ಮಾಲೀಕರಾದ ಬೇಬಿ ಸುವರ್ಣ, ವೈ.ನಾಣ್ಯಪ್ಪ ಪೂಜಾರಿ ಹಾಗೂ ಅವರ ಮಕ್ಕಳು ಅತಿಥಿಗಳನ್ನು ಸ್ವಾಗತಿಸಿದರು.
ಸುವರ್ಣ ರೆಸಾರ್ಟ್ನ ಸಂಪತ್ ಬಿ.ಸುವರ್ಣ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಯಾತ್ರಿಕರು, ಶ್ರೀ ರಾಮಕ್ಷೇತ್ರ ಕನ್ಯಾಡಿಗೆ ಭೇಟಿ ನೀಡುವ ಭಕ್ತರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಸುವರ್ಣ ರೆಸಾರ್ಟ್ನಲ್ಲಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಆಕಷರ್ಕ ವಿನ್ಯಾಸದ ಕಾಟೇಜ್ಗಳು ರೆಸಾರ್ಟ್ನ ವಿಶೇಷ ಆಕರ್ಷಣೆಯಾಗಿವೆ. ಯಾತ್ರಿಕರು ಮತ್ತು ಪ್ರವಾಸಿಗರು ಆರಾಮದಾಯಕವಾಗಿ ವಾಸ್ತವ್ಯ ಹೂಡಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಉತ್ತಮ ಆತಿಥ್ಯ ಹಾಗೂ ಗುಣಮಟ್ಟದ ಸೇವೆ ನೀಡುವ ಮೂಲಕ ಗ್ರಾಹಕರಿಗೆ ಉತ್ತಮ ಅನುಭವ ಒದಗಿಸುವುದು ಸಂಸ್ಥೆ ಉದ್ದೇಶವಾಗಿದೆ ಎಂದರು.