ತಣ್ಣೀರುಬಾವಿಯಲ್ಲಿ ಸಾಮೂಹಿಕ ಸಮುದ್ರ ಪೂಜೆ

ಸಾಮೂಹಿಕ ಸಮುದ್ರ ಪೂಜೆ ಶುಕ್ರವಾರ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಜರುಗಿತು. ಕದ್ರಿ ಕದಳಿ ಮಠದ ಮಠಾಧೀಶರಾದ ಶ್ರೀ ರಾಜಯೋಗಿ ನಿರ್ಮಲನಾಥಜೀ ಅವರು ಸಮುದ್ರಕ್ಕೆ ಗಂಗಾರತಿ ಬೆಳಗಿದರು. ರಂಜನ್ ಕಾಂಚನ್, ಸದಾನಂದ ಅಮೀನ್ ಕುದ್ರೋಳಿ ಉಪಸ್ಥಿತರಿದ್ದರು.
ಸಾಮೂಹಿಕ ಸಮುದ್ರ ಪೂಜೆ ಶುಕ್ರವಾರ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಜರುಗಿತು. ಕದ್ರಿ ಕದಳಿ ಮಠದ ಮಠಾಧೀಶರಾದ ಶ್ರೀ ರಾಜಯೋಗಿ ನಿರ್ಮಲನಾಥಜೀ ಅವರು ಸಮುದ್ರಕ್ಕೆ ಗಂಗಾರತಿ ಬೆಳಗಿದರು. ರಂಜನ್ ಕಾಂಚನ್, ಸದಾನಂದ ಅಮೀನ್ ಕುದ್ರೋಳಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಾಲನೆ ನೀಡಿದ ಕದ್ರಿ ಕದಳಿ ಮಠದ ಮಠಾಧೀಶ ಶ್ರೀ ರಾಜಯೋಗಿ ನಿರ್ಮಲನಾಥಜೀ
  • ಸಮುದ್ರಕ್ಕೆ ಹಾಲು ಹಣ್ಣು ಹಂಪಲುಗಳನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಕೆ
  • ಬೊಕ್ಕಪಟ್ಣ ಶ್ರೀ ಬ್ರಹ್ಮ ಬೊಬ್ಬರ್ಯ ದೇವಸ್ಥಾನಕ್ಕೆ ಭೇಟಿ
ಮಂಗಳೂರು: ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾ ವತಿಯಿಂದ ಸಾಮೂಹಿಕ ಸಮುದ್ರ ಪೂಜೆ ಶುಕ್ರವಾರ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಜರುಗಿತು.
ಭಜನಾ ಸಂಕೀರ್ತನೆ ಹಾಗೂ ಶ್ರೀ ಮಹಾಲಕ್ಷ್ಮೀ ತಾಯಿಗೆ ಪೂಜೆ ನೆರವೇರಿತು. ಬಳಿಕ ಕದ್ರಿ ಕದಳಿ ಮಠದ ಮಠಾಧೀಶರಾದ ಶ್ರೀ ರಾಜಯೋಗಿ ನಿರ್ಮಲನಾಥಜೀ ಅವರು ಸಮುದ್ರಕ್ಕೆ ಗಂಗಾರತಿ ಬೆಳಗಿ ಸಮುದ್ರಕ್ಕೆ ಹಾಲು ಹಣ್ಣು ಹಂಪಲುಗಳನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮೊದಲು ನಾಲ್ಕು ಗ್ರಾಮಗಳ ಆರಾಧನಾ ಕ್ಷೇತ್ರವಾಗಿರುವ ಬೊಕ್ಕಪಟ್ಣ ಶ್ರೀ ಬ್ರಹ್ಮ ಬೊಬ್ಬರ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.
ಬೋಳೂರು ಮೊಗವೀರ ಮಹಾಸಭಾ ಉಪಾಧ್ಯಕ್ಷ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ರಂಜನ್ ಕಾಂಚನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಪವರ್ ಲಿಫ್ಟರ್ ಸதானಂದ ಅಮೀನ್ ಕುದ್ರೋಳಿ ಅವರು ಮುಖ್ಯ ಅತಿಥಿಗಳಾಗಿದ್ದರು.
ಸಂಯುಕ್ತ ಮಹಾಸಭಾ ಅಧ್ಯಕ್ಷ ಸುಭಾಶ್‌ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಯಶವಂತ ಬೋಳೂರು, ಉಪಾಧ್ಯಕ್ಷ ರಂಜನ್ ಎಸ್. ಕಾಂಚನ್ ಬೋಳೂರು, ಕೋಶಾಧಿಕಾರಿ ಸುರೇಶ್ ಸುವರ್ಣ ಬೆಂಗ್ರೆ, ಜೊತೆ ಕಾರ್ಯದರ್ಶಿ ಶ್ಯಾಮ ಸುಂದರ್ ಕಾಂಚನ್ ಕುದ್ರೋಳಿ, ಸುರೇಶ್ ಸುವರ್ಣ ನೀರೇಶ್ವಾಲ್ಯ, ಕದ್ರಿ ಮಂಜುನಾಥ ದೇವಸ್ಥಾನದ ಪ್ರತಿನಿಧಿ ನಾರಾಯಣ ಕೋಟ್ಯಾನ್ ಬೊಕ್ಕಪಟ್ಣ, ವಿವಿಧ ಗ್ರಾಮಗಳ ಗುರಿಕಾರರು, ಪ್ರತಿನಿಧಿಗಳು, ಸದಸ್ಯರು, ಮಹಿಳಾ ಸಂಘಗಳ ಸದಸ್ಯೆಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net