ವಳಲಂಬೆ ದೇಗುಲದಲ್ಲಿ ಸಾಮೂಹಿಕ ಧನ್ವಂತರಿ ಪೂಜೆ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ರಾಜೇಶ್ ಮೇನಾಲ ಉದ್ಘಾಟಿಸಿದರು.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ರಾಜೇಶ್ ಮೇನಾಲ ಉದ್ಘಾಟಿಸಿದರು.
Published on
ಧಾರ್ಮಿಕ ಮುಖಂಡ ರಾಜೇಶ್ ಮೇನಾಲ ಕಾರ್ಯಕ್ರಮ ಉದ್ಘಾಟಿಸಿದರು. ಪೂಜಾ ಸಮಿತಿ ಅಧ್ಯಕ್ಷ ಯೋಗೀಶ್ ದೇವ ಅಧ್ಯಕ್ಷತೆ ವಹಿಸಿದ್ದರು. ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಸುರೇಶ್ ಕಣೆಮರಡ್ಕ, ಮಿತ್ರದೇವ ಮಡಪ್ಪಾಡಿ, ರವಿಕಲಾ ಚೆಮ್ನೂರು, ಪೂರ್ಣಚಂದ್ರ ಪೈಕ, ಸತೀಶ್ ಬಂಬುಳಿ, ಬಾಬು ಗೌಡ ಆಚ್ರಪ್ಪಾಡಿ, ಮುಳಿಯ ಕೇಶವ ಭಟ್, ಬಿ.ಕೆ.ಬೆಳ್ಯಪ್ಪ ಗೌಡ, ನಳಿನಾಕ್ಷ ಹಿರಿಯಡ್ಕ, ವಿಜಯ ಕುಮಾರ್ ಚಾರ್ಮತ, ಕೇಶವ ಹೊಸೊಳಿಕೆ, ವೇಣುಕುಮಾರ್ ಚಿಲ್ತಡ್ಕ ಮೊದಲಾದವರಿದ್ದರು.
ರಾಜೇಶ್ ವಲಯದ ವರದಿ ವಾಚಿಸಿದರು. ಕಿಶೋರ್ ಕುಮಾರ್ ಪೈಕ ಹಾಗೂ ಹರಿಶ್ಚಂದ್ರ ಕುಳ್ಳಂಪ್ಪಾಡಿ ನಿರೂಪಿಸಿದರು.

ಗೌರವಾರ್ಪಣೆ, ಬಹುಮಾನ ವಿತರಣೆ

ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಪಿ.ಸಿ ಜಯರಾಮ ಗೌಡ ಮಡಪ್ಪಾಡಿ ಅವರನ್ನು ಗೌರವಿಸಲಾಯಿತು. ನಂತರ 2024-25ರ ವರೆಗೆ ಒಕ್ಕೂಟದ ಪದಾಧಿಕಾರಿಗಳಾಗಿದ್ದವರು, ಪ್ರಸ್ತುತ ಪದಾಧಿಕಾರಿಗಳನ್ನು ಮತ್ತು ವಿಪತ್ತು ನಿರ್ವಹಣಾ ಘಟಕದ ಸದಸ್ಯರನ್ನು ಗೌರವಿಸಲಾಯಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net