ಗರಿಕೆ ಸಮರ್ಪಣೆಯಿಂದ ಜೀವನದ ಕಷ್ಟ ನಿವಾರಣೆ MANKUDE

ಸುವರ್ಣ ಮಹೋತ್ಸವ ಸಂಭ್ರಮದ ಧಾರ್ಮಿಕ ಸಭೆಯಲ್ಲಿ ಕಣಿಯೂರು ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಹೈಕೋರ್ಟ್ ವಕೀಲ ಡಾ.ಅರುಣಶ್ಯಾಮ್, ಮಂಕುಡೆ ಶ್ರೀನಿವಾಸ ಆಚಾರ್ ಮೊದಲಾದವರಿದ್ದರು.
ಸುವರ್ಣ ಮಹೋತ್ಸವ ಸಂಭ್ರಮದ ಧಾರ್ಮಿಕ ಸಭೆಯಲ್ಲಿ ಕಣಿಯೂರು ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಹೈಕೋರ್ಟ್ ವಕೀಲ ಡಾ.ಅರುಣಶ್ಯಾಮ್, ಮಂಕುಡೆ ಶ್ರೀನಿವಾಸ ಆಚಾರ್ ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಶುಭನುಡಿ
ವಿಟ್ಲ: ನಿಷ್ಕಲ್ಮಶ ಭಕ್ತಿಯಿಂದ ಮಾಡುವ ಸಮರ್ಪಣೆಗೆ ಭಗವಂತ ಅನುಗ್ರಹಿಸುತ್ತಾನೆ. ಗಣಪತಿಗೆ ಗರಿಕೆ ಸಮರ್ಪಣೆಯಿಂದ ಜೀವನದ ಕಷ್ಟ ನಿವಾರಣೆಯಾಗುತ್ತದೆ. ಮಂಕುಡೆಯ ಯುವಕರು, ಹಿರಿಯರು ಶ್ರಮ ವಹಿಸಿ ಮಾಡಿದ ಸಾಧನೆ ಅತ್ಯಂತ ಶ್ರೇಷ್ಠವಾದುದು ಎಂದು ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಹೇಳಿದರು.
ಸೋಮವಾರ ಕೊಳ್ನಾಡು ಗ್ರಾಮದ ಮಂಕುಡೆ-ಕುಡ್ತಮುಗೇರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿ, ಹಳೇ ವಿದ್ಯಾರ್ಥಿ ಯುವಕ ಮಂಡಲ, ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರ ಸಹಯೋಗದೊಂದಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವ ಸಂಭ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹೈಕೋರ್ಟ್ ವಕೀಲ ಡಾ.ಅರುಣಶ್ಯಾಮ್ ಮಾತನಾಡಿ, ಗಣೇಶೋತ್ಸವದಲ್ಲಿ ಜೀವನ ಪಾಠವಿದೆ. ಧಾರ್ಮಿಕ ಆಚರಣೆಗಳಲ್ಲಿ ಕುಟುಂಬ ವ್ಯವಸ್ಥೆ ಮತ್ತು ಹಿಂದೂ ಸಂಘಟನೆಯ ಶಕ್ತಿ ಅಡಗಿದೆ. ೫೦ ವರ್ಷಗಳಿಂದ ಒಗ್ಗಟ್ಟಾಗಿ ಸಂಘಟನೆ ಮುನ್ನಡೆಸಿದ್ದು ಅಭಿನಂದನೀಯ ಎಂದು ಹೇಳಿದರು
.
ಮಂಕುಡೆ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಕುಡೆ ಶ್ರೀನಿವಾಸ ಆಚಾರ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ರಾಜಾರಾಮ ಬಲಿಪಗುಳಿ, ಎಂ.ಸಿ.ಎಫ್. ನಿವೃತ್ತ ಪ್ರಧಾನ ವ್ಯವಸ್ಥಾಪಕ ಜಯಶಂಕರ ರೈ ಚೆಂಬರಡ್ಕ, ಕುಡ್ತಮುಗೇರು ಹಾಲು ಉ.ಸ.ಸಂಘದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು, ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರಾದ ಅರವಿಂದ ರೈ ಮೂರ್ಜೆಬೆಟ್ಟು, ಅಮರನಾಥ ಶೆಟ್ಟಿ ಕುಳಾಲು, ತಿಮ್ಮಪ್ಪ ನಾಯ್ಕ ಕುಳಾಲು ಕಾನ, ಚಂದ್ರಹಾಸ ಪೂಜಾರಿ ಪಾಲ್ತಾಜೆ, ಲವೀನ್ ಪೂಜಾರಿ ಕುಡ್ತಮುಗೇರು, ಸಂಘ-ಸಂಸ್ಥೆಗಳ ಅಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ ಬೊಳ್ಳೆಚ್ಚಾರು, ನವೀನ್ ಕುಲಾಲ್ ಪುಡೆಮಜಲು, ಅನಿಲ್ ಕುಮಾರ್ ಕರೈ, ಕಿಶೋರ್ ದೇವಾಡಿಗ ನೂಜಿಬೈಲು, ಕೇಶವ ಪೂಜಾರಿ ಚೆಂಬರಡ್ಕ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ಕೋಶಾಧಿಕಾರಿ ಪದ್ಮನಾಭ ಮಂಕುಡೆ, ಹಳೇ ವಿದ್ಯಾರ್ಥಿ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಪೂಜಾರಿ ಪರ್ತಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ನಂದನ್ ಕುಮಾರ್ ಮಂಕುಡೆ ನೆಡ್ಯಾಳ, ವಿಷ್ಣುಮೂರ್ತಿ ಭಜನಾ ಮಂದಿರದ ಅಧ್ಯಕ್ಷ ಹರಿಣಾಕ್ಷ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಮನೀಶ್ ಅಮೀನ್ ಮಂಕುಡೆ ಮತ್ತಿತರರು ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಟೈಲರ್ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿ ಮತ್ತು ಹಳೇ ವಿದ್ಯಾರ್ಥಿ ಯುವಕ ಮಂಡಲ ಸಂಚಾಲಕ ರಮೇಶ್ ಪ್ರಸ್ತಾಪಿಸಿದರು. ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಕಲ್ಕಾಜೆ ವಂದಿಸಿದರು. ಸದಸ್ಯ ಪರಮೇಶ್ವರ ಆಚಾರ್ಯ ನೆಡ್ಯಾಳ ಕಾರ್ಯಕ್ರಮ ನಿರೂಪಿಸಿದರು.
"

ಗಣೇಶೋತ್ಸವದಲ್ಲಿ ಜೀವನ ಪಾಠವಿದೆ. ಧಾರ್ಮಿಕ ಆಚರಣೆಗಳಲ್ಲಿ ಕುಟುಂಬ ವ್ಯವಸ್ಥೆ ಮತ್ತು ಹಿಂದೂ ಸಂಘಟನೆಯ ಶಕ್ತಿ ಅಡಗಿದೆ. ೫೦ ವರ್ಷಗಳಿಂದ ಒಗ್ಗಟ್ಟಾಗಿ ಸಂಘಟನೆ ಮುನ್ನಡೆಸಿದ್ದು ಅಭಿನಂದನೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net