ಮಂಜೇಶ್ವರ ನಿವಾಸಿ ಕುವೈಟ್‌ನಲ್ಲಿ ಮೃತ್ಯು

ಹೃದಯಾಘಾತ
ಕಿರಣ್‌ರಾಜ್
ಕಿರಣ್‌ರಾಜ್
Published on: 

ಕಾಸರಗೋಡು: ಮಂಜೇಶ್ವರ ಹೊಸಂಗಡಿ ಸನಿಹದ ಕಟ್ಟಿ ಬಜಾರ್ ನಿವಾಸಿ ಹೈಮೇಶ ಬಿ.ಎಂ-ವೀಣಾ ದಂಪತಿ ಪುತ್ರ ಕಿರಣ್‌ರಾಜ್ (42) ಕುವೈಟ್‌ನ ತಾವು ಕೆಲಸ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಭಾನುವಾರ ಸಂಜೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. 20 ವರ್ಷಗಳಿಂದ ಕುವೈಟ್‌ನಲ್ಲಿ ಉದ್ಯೋಗದಲ್ಲಿದ್ದು, ಐದು ವರ್ಷಗಳಿಂದ ಕೈತನ್‌ನ ಪಾನ್ ಗ್ಲೋಬಲ್ ಕಂಪನಿಯಲ್ಲಿ ಪ್ರಬಂಧಕರಾಗಿ ಪತ್ನಿ, ಪುತ್ರಿಯೊಂದಿಗೆ ವಾಸಿಸುತ್ತಿದ್ದರು. ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಮೃತದೇಹವನ್ನು ಊರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಕುವೈಟ್ ಬಿಲ್ಲವ ಸಂಘದಲ್ಲಿ ಕಳೆದ 2 ವರ್ಷಗಳಿಂದ ಕೋಶಾಧಿಕಾರಿಯಾಗಿದ್ದರು.