ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಸಾಮೂಹಿಕ ಲಕ್ಷ್ಮೀ ಪೂಜೆಯ ಕಾರ್ಯಕ್ರಮದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಕಾಂತ್, ಕೆ.ದಿವಾಕರ ಮೂಲ್ಯ, ಕೆ.ಕೃಷ್ಣಪ್ಪ ಕಣ್ವತೀರ್ಥ, ಗೋಪಾಲ ಕೆ. ಇದ್ದರು.
ವಿಟ್ಲ: ಮಾತ್ಸರ್ಯ ಬಿಟ್ಟು ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ. ತ್ಯಾಗ, ಸೇವೆ, ಸಮರ್ಪಣೆಯ ಮೂಲಕ ವ್ರತಾಚರಣೆ ನಡೆಸಬೇಕು. ಹಸಿವಿನ ಜೀವನವನ್ನು ಅರಿಯುವ ನಿಟ್ಟಿನಲ್ಲಿ ಭೋಜನ ನಡೆಸಲಾಗುತ್ತಿದೆ. ವ್ರತಾಚರಣೆಗಳು ಬದುಕಿನಲ್ಲಿ ಬದಲಾವಣೆಯನ್ನು ತಂದು ಭಗವಂತನ ಸಾಮೀಪ್ಯವನ್ನು ನೀಡುತ್ತದೆ. ನಿಸರ್ಗವನ್ನು ಸ್ವಾರ್ಥಕ್ಕೆ ಬಳಸುವುದನ್ನು ತಡೆಯಬೇಕಾಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ ೪೮ ದಿನಗಳ ಕಾಲ ನಡೆಯುವ ಸಾಮೂಹಿಕ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಗಣಪತಿ ಹೋಮ, ಭಜನಾ ಸಂಕೀರ್ತನೆ, ಗುರುಪೂಜೆ, ಕ್ಷೀರಾಭಿಷೇಕ, ನಾಗಾರಾಧನೆ, ಗೋಪೂಜೆ, ಬಾಲಭೋಜನ, ಸಾಮೂಹಿಕ ಕುಂಕುಮಾರ್ಚನೆ, ಲಕ್ಷ್ಮೀ ಪೂಜೆ ನಡೆಯಿತು.
ವಕೀಲ ಶ್ರೀಕಾಂತ್, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಕೆ.ದಿವಾಕರ ಮೂಲ್ಯ, ವಿಧಾನ ಸಭೆ ನಿವೃತ್ತ ಅಽನ ಕಾರ್ಯದರ್ಶಿ ಕೆ.ಕೃಷ್ಣಪ್ಪ ಕಣ್ವತೀರ್ಥ, ಕಡಬ ಉಪತಹಶೀಲ್ದಾರ ಗೋಪಾಲ ಕೆ., ಡಾ.ಜೆಡ್ಡು ಗಣಪತಿ ಭಟ್, ಟ್ರಸ್ಟ್‌ನ ಅಧ್ಯಕ್ಷ ಮೋನಪ್ಪ ಭಂಡಾರಿ, ಟ್ರಸ್ಟಿಗಳಾದ ಪುರುಷೋತ್ತಮ ಚೆಂಡ್ಲಾ, ಚಂದ್ರಶೇಖರ ಮೂಲ್ಯ, ತುಳುವರೆ ಚಾವಡಿ ಅಧ್ಯಕ್ಷ ವಿಶುಕುಮಾರ್, ಮಹೇಶ್, ಉಮೇಶ್ ಬಂಗೇರ, ಸಮಿತಿಯ ಹರೀಶ್ ಬೊಟ್ಟಾರಿ, ವೆಂಕಟ್ರಮಣ ಭಟ್ ಕಲ್ಯಾಟೆ, ರೇವತಿ ಪೆರ್ನೆ, ರಾಜೇಶ್ ಬಾಳೆಕಲ್ಲು ಉಪಸ್ಥಿತರಿದ್ದರು.
ನಾರಾಯಣ ಭಟ್ ಸ್ವಾಗತಿಸಿದರು. ಸೋಮಪ್ಪ ಪೂಜಾರಿ ವಂದಿಸಿದರು. ಸತೀಶ್ ಕುಮಾರ್ ಕಾಪು ಕಾರ್ಯಕ್ರಮ ನಿರೂಪಿಸಿದರು.
"
ಜೀವನದಲ್ಲಿ ಸತ್ಕಾರ್ಯ ನಡೆಸುವಾಗ ತೊಡಕುಗಳು ಸಹಜ, ಅವನ್ನು ಮೆಟ್ಟಿ ಮುನ್ನಡೆಯುವ ಕಾರ್ಯವಾಗಬೇಕು. ನಮ್ಮನ್ನು ನಾವು ಭಗವಂತನಿಗೆ ಸಮರ್ಪಿಸುವ ಕಾರ್ಯವಾಗಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ.