ಪ್ರತಿಯೊಬ್ಬರ ಮನೆಯಲ್ಲಿ ದೇವರ ನಾಮ ಸ್ಮರಣೆ MANILA

ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಅಂಗವಾಗಿ ಸಾಮೂಹಿಕ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಮುಖರಾದ ಡಾ.ಕೆ.ಚಂದ್ರಶೇಖರ್, ಜಯರಾಮ್ ಪೂಜಾರಿ, ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದರಿದ್ದರು.
ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಅಂಗವಾಗಿ ಸಾಮೂಹಿಕ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಮುಖರಾದ ಡಾ.ಕೆ.ಚಂದ್ರಶೇಖರ್, ಜಯರಾಮ್ ಪೂಜಾರಿ, ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ
ವಿಟ್ಲ: ಸಮಾಜದಲ್ಲಿ ಆಗುವ ಪರಿವರ್ತನೆಯ ಬಗ್ಗೆ ಎಚ್ಚರ ವಹಿಸಬೇಕು. ಜ್ಞಾನ ಭಂಡಾರದ ಶಕ್ತಿಯನ್ನು ಅರಿಯಬೇಕು. ಪ್ರತಿಯೊಬ್ಬರ ಮನೆಯಲ್ಲಿ ದೇವರ ನಾಮ ಸ್ಮರಣೆ ನಡೆಯಬೇಕು. ಪ್ರೀತಿಯ ಮೌಲ್ಯ ಕಳೆಯುತ್ತಿದ್ದು, ಪೂರ್ವ ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು. ಮಕ್ಕಳ ಭವಿಷ್ಯದ ಹಿತದ ನಿಟ್ಟಿನಲ್ಲಿ ಬಾಲಭೋಜನದ ಅಗತ್ಯವಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮ ಶ್ರೀದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಅಂಗವಾಗಿ ೪೮ ದಿನಗಳ ಕಾಲ ನಡೆಯುವ ಸಾಮೂಹಿಕ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಗಣಪತಿ ಹೋಮ, ಭಜನಾ ಸಂಕೀರ್ತನೆ, ಗುರುಪೂಜೆ, ಕ್ಷೀರಾಭಿಷೇಕ, ನಾಗಾರಾಧನೆ, ಗೋಪೂಜೆ ನಡೆಯಿತು. ಬಾಲಭೋಜನ, ಸಾಮೂಹಿಕ ಕುಂಕುಮಾರ್ಚನೆ, ಲಕ್ಷ್ಮೀ ಪೂಜೆ ನಡೆಯಿತು.
ಪುತ್ತೂರು ಸಂತ ಫಿಲೋಮಿನಾ ಕಾಲೇಜು ಉಪನ್ಯಾಸಕ ಡಾ.ಕೆ.ಚಂದ್ರಶೇಖರ್, ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ಜಯರಾಮ್ ಪೂಜಾರಿ, ದೇರಳಕಟ್ಟೆ ಶಾಲೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾಸರಗೋಡು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರೂಪವಾಣಿ ಆರ್.ಭಟ್, ನಾಗಬ್ರಹ್ಮ ಸೇವಾ ಸಮಿತಿ ಸದಸ್ಯ ಶ್ರೀಕೃಷ್ಣ ಭಟ್ ಅಳಕೆ, ರಾಮಕುಂಜ ಉಪನ್ಯಾಸಕ ಪ್ರಕಾಶ್, ಮಾಣಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಷ್ಣು ಭಟ್ ಕೊಮ್ಮುಂಜೆ, ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಐತ್ತಪ್ಪ ಕುಲಾಲ್, ಬೆಳ್ಳಾರೆ ಶ್ರೀರಾಜರಾಜೇಶ್ವರಿ ದೇವಸ್ಥಾನದ ಗೋಪಾಲಕೃಷ್ಣ ನಾಯಕ್, ಟ್ರಸ್ಟಿ ಉಮೇಶ್ ಮೂಲ್ಯ ಬೊಮ್ಮಸಂದ್ರ, ಕುಲಾಲ ಸಂಘದ ರಮೇಶ್ ಸಾಲ್ಯಾನ್, ಸಮಿತಿ ಅಧ್ಯಕ್ಷ ಹರೀಶ್ ಬೊಟ್ಟಾರಿ, ಸಂಚಾಲಕ ಚೆನ್ನಪ್ಪ ಕುಲಾಲ್ ಎರುಗಲ್ಲು, ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ, ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಉಪಸ್ಥಿತರಿದ್ದರು.
ಕ್ಷೇತ್ರದ ವ್ಯವಸ್ಥಾಪಕ ಸೋಮಪ್ಪ ಪೂಜಾರಿ ಕಿಲ್ಲೂರು ಸ್ವಾಗತಿಸಿದರು. ಎಚ್.ಕೆ.ನಯನಾಡು ನಿರೂಪಿಸಿದರು. ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ದೇವಪ್ಪ ಕುಲಾಲ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net