ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ೧೨ ಕಾಯಿ ಗಣಪತಿ ಯಾಗ, ನವಗ್ರಹ ಶಾಂತಿ ಹವನ, ಚಂಡಿಕಾ ಯಾಗ, ದುರ್ಗಾಮಹಾಲಕ್ಷ್ಮೀ, ವಿಠೋಭಾ ರುಕುಮಾಯಿ, ನಾಗ ಹಾಗೂ ದೈವಗಳ ಸಾನ್ನಿಧ್ಯದಲ್ಲಿ ನವಕ ಕಲಶ ನಡೆಯಿತು. ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಚಂಡಿಕಾಯಾಗದ ಪೂರ್ಣಾಹುತಿ, ಪ್ರಸನ್ನ ಮಹಾಪೂಜೆ ಜರಗಿತು. ಸಂಜೆ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಶ್ರೀಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ವೈದಿಕ ಕಾರ್ಯಗಳು ನೆರವೇರಿದವು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಮೇಳದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು.