ವಿಟ್ಲ: ಸವಾಲುಗಳ ನಡುವೆ ಒಳ್ಳೆಯ ಕರ್ಮದಿಂದ ಜೀವನ ನಡೆಸಬೇಕು. ನವರಾತ್ರಿಯಲ್ಲಿ ನಮ್ಮೊಳಗಿನ ಅಸುರರ ನಿಗ್ರಹವಾಗಬೇಕು. ಸನ್ಯಾಸಿಗಳು ಲೋಕ ಹಿತಕ್ಕಾಗಿ ಬೇಡುವುದು ಅನಿವಾರ್ಯವಾಗಿದೆ. ದೇವರ ಸೇವೆಯಲ್ಲಿ ಸಂಪತ್ತು ಸದ್ವಿನಿಯೋಗವಾಗಬೇಕು. ಹೆಸರು ಶಾಶ್ವತವಾಗಿ ಉಳಿಯಲು ಭಕ್ತಿ ಮಾರ್ಗದ ಸಾಧನೆ ಅಗತ್ಯವಾಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮದಲ್ಲಿ ೨೭ನೇ ವರ್ಷದ ಮಾಣಿಲ ಶ್ರೀಧಾಮ ಶರನ್ನವರಾತ್ರಿ ಉತ್ಸವದ ಅಂಗವಾಗಿ ದತ್ತಯಾಗ, ಧನ್ವಂತರಿ ಹೋಮ, ಚಂಡಿಕಾಯಾಗದ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಭೂ ಸೇನೆಯ ನಿವೃತ್ತ ಸುಬೇದಾರ್ ಚಂದ್ರಶೇಖರ್ ಪೂಜಾರಿ ಕಲ್ಲಡ್ಕ ಪೆರುವಾಯಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರಿಂದ ಮಧುಕರಿ ನಡೆಯಿತು.
ದೂರದರ್ಶನದ ಅಪರ ನಿರ್ದೇಶಕ ಡಾ.ಮಹೇಶ್ ಜೋಶಿ, ಬೆಂಗಳೂರು ತುಳುಕೂಟದ ಅಧ್ಯಕ್ಷ ದಿನೇಶ್ ಹೆಗ್ಡೆ, ಲಕ್ಷ್ಮಣ ಗೌಡ ಕೆಜಿಎಫ್, ಗೋವಿಂದ ಗೌಡ ಹೊಸಕೋಟೆ, ಮಂಜುನಾಥ ಭಂಡಾರಿ, ಬೆಂಗಳೂರು ಬಿಜೆಪಿ ವಕ್ತಾರೆ ಕಾಂತಿ ಶೆಟ್ಟಿ, ಟ್ರಸ್ಟಿಗಳಾದ ಉಮೇಶ್ ಬಂಗೇರ ಬೊಮ್ಮಸಂದ್ರ, ಮಹೇಶ್ ಮೂಲ್ಯ, ದೇವಪ್ಪ ಮೂಲ್ಯ ಪಂಜಿಕಲ್ಲು, ಚಂದ್ರಶೇಖರ್ ಮೂಲ್ಯ ಮಂಗಳೂರು, ರೇವತಿ ಪೆರ್ನೆ, ಪ್ರಮುಖರಾದ ಈಶ್ವರ ಮೂಲ್ಯ ಬೆಂಗಳೂರು, ಜಿಲ್ಲಾ ಮೂರ್ತೆದಾರರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಉಪಸ್ಥಿತರಿದ್ದರು.
ಟ್ರಸ್ಟಿ ಟಿ.ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಶಿಕ್ಷಕಿ ನಳಿನಿ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟಿ ಪುರುಷೋತ್ತಮ ವಂದಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.