ಮಂಗಳೂರು-ಮುಂಬೈ ದಿನಂಪ್ರತಿ ಇಂಡಿಗೋ ವಿಮಾನ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಜತೆ  ಕೇಕ್ ತುಂಡರಿಸಿ ಸಂಭ್ರಮಿಸಲಾಯಿತು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಜತೆ ಕೇಕ್ ತುಂಡರಿಸಿ ಸಂಭ್ರಮಿಸಲಾಯಿತು.
Published on
ಮಂಗಳೂರು: ಮಂಗಳೂರು-ಮುಂಬೈ ನಡುವೆ ದಿನಂಪ್ರತಿ ಇಂಡಿಗೋ ವಿಮಾನ ಹಾರಾಟಕ್ಕೆ ಕ್ರಿಸ್ಮಸ್ ಶುಭ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಉದ್ಘಾಟನಾ ವಿಮಾನದಲ್ಲಿ ಮುಂಬೈಯಿಂದ 187 ಪ್ರಯಾಣಿಕರು ಮಂಗಳೂರು ಅಂ.ರಾ. ವಿಮಾನ ನಿಲ್ದಾಣಕ್ಕೆ ಬಂದಿಳಿದರು. 186 ಪ್ರಯಾಣಿಕರು ಮುಂಬೈಗೆ ಪ್ರಯಾಣಿಸಿದರು. ಹೊಸ ವಿಮಾನ ಸೇರಿದಂತೆ ಮಂಗಳೂರು-ಮುಂಬೈ ನಡುವೆ 4 ಇಂಡಿಗೋ ಹಾಗೂ 1 ಏರ್ ಇಂಡಿಯಾ ಸೇರಿದಂತೆ ದಿನಕ್ಕೆ ಒಟ್ಟು 5 ವಿಮಾನಗಳು ಹಾರಾಟ ನಡೆಸುತ್ತಿವೆ. ಇದರಿಂದ ಮುಂಬೈ ಮತ್ತು ಮಂಗಳೂರು ನಡುವೆ ಸಂಚರಿಸುವ ಉದ್ಯಮಿಗಳು ಹಾಗೂ ಇತರ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಜತೆ ದೀಪ ಬೆಳಗಿಸಿ, ಕೇಕ್ ತುಂಡರಿಸಿ ಸಂಭ್ರಮಿಸಲಾಯಿತು.
ನೂತನ ವಿಮಾನ ಎನ್‌ಎಂಐ-ಐಎಕ್ಸ್‌ಇ 6ಇ 865 ಪ್ರತಿ ದಿನ ಮುಂಬೈಯಿಂದ ಬೆಳಗ್ಗೆ 10.40ಕ್ಕೆ ಹೊರಟು, ಮಧ್ಯಾಹ್ನ 12.10ಕ್ಕೆ ಮಂಗಳೂರು ತಲುಪಲಿದೆ. ಐಎಕ್ಸ್‌ಇ-ಎನ್‌ಎಂಐ 6ಇ 866 ಪ್ರತೀ ಸೋಮವಾರ ಮತ್ತು ಮಂಗಳವಾರ ಸಂಜೆ 4.05ಕ್ಕೆ ಮಂಗಳೂರಿನಿಂದ ಹೊರಟು 5.45ಕ್ಕೆ ಮುಂಬೈ ತಲುಪಲಿದೆ. ಐಎಕ್ಸ್‌ಇ-ಎನ್‌ಎಂಐ 6ಇ 866 ಬುಧವಾರದಿಂದ ಭಾನುವಾರದ ತನಕ ಮಧ್ಯಾಹ್ನ 12.40ಕ್ಕೆ ಮಂಗಳೂರಿನಿಂದ ಹೊರಟು 2.20ಕ್ಕೆ ಮುಂಬೈ ತಲುಪಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net