ವಿಚಾರಣೆ ವೇಳೆ ವಕೀಲರ ಸಂಘದ ಪರವಾಗಿ ವಾದ ಮಂಡಿಸಿದ ವಕೀಲ ಪಿ.ಪಿ.ಹೆಗ್ಡೆ, ಮಂಗಳೂರು ಜೈಲ್‌ನ ಒಳಗೆ ಜಾಮರ್ ಇದ್ದರೂ ಸರಿಯಾಗಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿದೆ. ಆದರೆ ಹೊರಗೆ 900 ಮೀಟರ್ ವ್ಯಾಪ್ತಿಯೊಳಗೆ ಕಚೇರಿ, ಕೋರ್ಟ್, ಸಂಘ ಸಂಸ್ಥೆಗಳು, ಬ್ಯಾಂಕ್, ಕಾಲೇಜುಗಳು ಇರುವಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಲ್ಭಣವಾಗಿದೆ. ಆದ್ದರಿಂದ ಜೈಲ್‌ನ ಜಾಮರ್‌ನ್ನು ತೆಗೆದುಹಾಕಬೇಕು ಎಂದು ವಾದಿಸಿದರು.