ಮಂಗಳೂರು 1.76 ಲಕ್ಷ ರೂ. ಮೌಲ್ಯದ ಇ-ಸಿಗರೇಟ್ ವಶ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಲಾಲ್‌ಬಾಗ್ ಬಳಿಯ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಯೊಂದರಿಂದ 1.76 ಲಕ್ಷ ರೂ. ಮೌಲ್ಯದ ನಿಷೇಧಿತ ಇ- ಸಿಗರೇಟ್ ಮತ್ತು ವಿದೇಶಿ ಸಿಗರೇಟ್‌ಗಳನ್ನು ಬರ್ಕೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾಲಿಕ ಶಿವು ದೇಶಕೋಡಿ ಮತ್ತು ಕೆಲಸಗಾರ ಸಂತೋಷ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಂದ್ರ ಸರ್ಕಾರ ನಿಷೇಧಿಸಿರುವ ಇ-ಸಿಗರೇಟ್ ಮತ್ತು ವಿದೇಶಿ ಸೀಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಬರ್ಕೆ ಠಾಣೆಯ ಉಪ ನಿರೀಕ್ಷಕ ವಿನಾಯಕ ತೋರಗಲ್ ಅವರು ಸಿಬಂದಿಯೊಂದಿಗೆ ಲಾಲ್ ಬಾಗ್ ಬಳಿಯ ಶಾಪ್ ಒಂದರ ಪಕ್ಕದಲ್ಲಿರುವ ಗೋಡಾನ್ ಗೆ ದಾಳಿ ಮಾಡಿದ್ದಾರೆ. ಇದೇ ವೇಳೆ ಶಾಪ್ ಗೆ ಮೂರು ದೊಡ್ಡ ರಟ್ಟಿನ ಬಾಕ್ಸ್‌ಗಳಲ್ಲಿ ಪಾರ್ಸೆಲ್ ಬಂದಿದ್ದು, ಅದನ್ನು ಪಂಚರ ಸಮಕ್ಷಮ ಪರಿಶೀಲಿಸಿದಾಗ ಹುಕ್ಕ ಎಳೆಯುವ ಸಾಮಗ್ರಿ ಎಂದು ತಿಳಿದು ಬಂದಿದೆ. ಬಳಿಕ ಕಾಂಪ್ಲೆಕ್ಸ್ ನ ತಳಮಹಡಿಯ ಪಾಕಿರ್ಂಗ್ ಸ್ಥಳದಲ್ಲಿ ಒಂದು ಕೊಠಡಿಯಲ್ಲಿ ಇರಿಸಲಾಗಿದ್ದ ಇ ಸಿಗರೇಟ್ ಮತ್ತು ವಿದೇಶಿ ಸಿಗರೇಟ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಅಂದಾಜು 1,22,700 ರೂ. ಮೌಲ್ಯದ ಒಟ್ಟು 120 ವಿವಿಧ ಕಂಪನಿಗಳ ಇ-ಸಿಗರೇಟ್ ಕಂಡು ಬಂದಿದೆ. ಸಿಗರೇಟ್ ಪ್ಯಾಕ್ ನ ಮೇಲೆ ಅದರ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರವನ್ನು ಪ್ರದರ್ಶಿಸದ ವಿವಿಧ ಕಂಪನಿಗಳ 26 ಸಾವಿರ ರೂ. ಮೌಲ್ಯದ ಒಟ್ಟು 10 ಪ್ಯಾಕ್ ನಂತೆ ಇರುವ 26 ಬಾಕ್ಸ್ ವಿದೇಶಿ ಸಿಗರೇಟು, 27,500 ರೂ. ಮೌಲ್ಯದ ಹುಕ್ಕಾ ಸೇವನೆಗೆ ಬಳಸುವ ವಿವಿಧ ಆಕೃತಿಗಳ ಒಟ್ಟು 275 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net