ತನಿಖೆ ವೇಳೆ ಕಲ್ಲೆಸೆತ ನಡೆದ ಸ್ಥಳ ಕರ್ನಾಟಕದ ಪ್ರದೇಶವೆಂದು ಗುರುತಿಸಿದ್ದು, ಈ ಬಗ್ಗೆ ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದುದರಿಂದ ಅಪಾಯ ಉಂಟಾಗಿರಲಿಲ್ಲ. ರಾತ್ರಿ ವೇಳೆ ಬಸ್ ನಿಲ್ಲಿಸದೆ ಮುಂದೆ ಸಾಗುತ್ತಿರುವ ಕೆಎಸ್ಸಾರ್ಟಿಸಿ ಬಸ್ ಚಾಲಕರ ಧೋರಣೆ ಖಂಡಿಸಿ ಕಲ್ಲೆಸೆದಿರುವುದಾಗಿ ವೃದ್ಧ ಪೊಲೀಸರಿಗೆ ತಿಳಿಸಿದ್ದಾನೆ.