ಮಳೆ ನೀರಿಗೆ ಮೋರಿ ಕಣ್ಮರೆ! Ajeru

ಮಲೆತ್ತಡ್ಕ- ದೇರಣಮೂಲೆ- ಆಜೇರು ಸಂಪರ್ಕ ರಸ್ತೆ ಮೋರಿಯ ಸುತ್ತ ಮಣ್ಣು ಕೊಚ್ಚಿ ಹೋಗಿರುವುದು.
ಮಲೆತ್ತಡ್ಕ- ದೇರಣಮೂಲೆ- ಆಜೇರು ಸಂಪರ್ಕ ರಸ್ತೆ ಮೋರಿಯ ಸುತ್ತ ಮಣ್ಣು ಕೊಚ್ಚಿ ಹೋಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತುರ್ತು ಕ್ರಮಕ್ಕಿಲ್ಲ ಆದ್ಯತೆ
  • ಅವೈಜ್ಞಾನಿಕ ಕಾಮಗಾರಿಯಿಂದ ‘ಸಂಕ’ಷ್ಟ

ಪುತ್ತೂರು:ಮಲೆತ್ತಡ್ಕ- ದೇರಣಮೂಲೆ- ಆಜೇರು ಸಂಪರ್ಕ ರಸ್ತೆಯನ್ನು ಅವೈಜ್ಞಾನಿಕವಾಗಿ ನಡೆಸಿದ್ದು, ಮಳೆಯ ಸಂದರ್ಭ ಮೋರಿ ಕೊಚ್ಚಿಹೋಗಿದೆ. ದುರಸ್ತಿ ನಡೆಸಬೇಕಾದ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದ್ದು, ಸ್ಥಳೀಯ ನಿವಾಸಿಗಳು ರಸ್ತೆ ಸಂಪರ್ಕವಿಲ್ಲದೆ ಪರದಾಟ ನಡೆಸುತ್ತಿದ್ದಾರೆ.

ದೇರಣಮೂಲೆ,ಕೊಪ್ಪರತೊಟ್ಟು, ನೆಲ್ಲಿಗುಡ್ಡೆ ಭಾಗದ ೨೦ ಮನೆಗಳಿಗೆ ರಸ್ತೆಸಂಪರ್ಕಕ್ಕೆ ತೀವ್ರ ಸಮಸ್ಯೆಯಾಗಿದೆ. ಸದ್ಯ ಕಿ.ಮೀ.ಸುತ್ತಿ ಬಳಸಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೋರಿಯ ಆಸುಪಾಸಿನ ಐದಾರು ಮನೆಗಳಿಗೆ ರಸ್ತೆ ಸಂಪರ್ಕವಿಲ್ಲದೆ ತೀವ್ರ ಸಮಸ್ಯೆಯಾಗುವುದನ್ನು ಗಮನಿಸಿ ರಸ್ತೆಯನ್ನು ಸ್ಥಳೀಯರುನಿರ್ಮಾಣ ಮಾಡಿದ್ದರು.

ಮೋರಿಗಳನ್ನುಅಳವಡಿಸಿದ್ದು, ಇದಕ್ಕೆ ಸರಿಯಾದ ಸಿಮೆಂಟ್ ಬಳಸಲಾಗಿಲ್ಲ. ಕಾರಣ ನೀರಿನಹರಿವು ಹೆಚ್ಚಾಗಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರ ಜತೆಗೆ ರಸ್ತೆಯುದ್ದಕ್ಕೂ ಬಿರುಕು ಕಾಣಿಸಿಕೊಂಡಿತ್ತು. ಸದ್ಯ ಸ್ಥಳೀಯ ನಿವಾಸಿಗಳು ಮೋರಿ ಮೇಲೆ ಮರದ ತುಂಡುಗಳನ್ನು ಜೋಡಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಪಂಚಾಯಿತಿ ತುರ್ತು ಕಾಮಗಾರಿಯನ್ನು ನಡೆಸಲು ಮೀನಮೇಷ ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

*ನಿರ್ಣಯಬರೆದಿಲ್ಲ: ಪುಣಚ ಗ್ರಾಮ ಸಭೆಯಲ್ಲಿ ಮಲೆತ್ತಡ್ಕ ಕೊಚ್ಚಿಹೋದ ಸೇತುವೆ ಬಗ್ಗೆ ತೀವ್ರ ಚರ್ಚೆ ನಡೆಸಲಾಗಿತ್ತು. ಕಾಮಗಾರಿ ನಡೆದು ಮೂರು ವರ್ಷ ಕಳೆದ ಕಾರಣ ಅದನ್ನು ಗುತ್ತಿಗೆದಾರರಲ್ಲಿ ದುರಸ್ತಿ ನಡೆಸಲು ಸಾಧ್ಯವಿಲ್ಲ ಎಂದು ಮಾರ್ಗದರ್ಶಿ ಅಽಕಾರಿ ತಿಳಿಸಿದ್ದರು. ಬಗ್ಗೆ ವಿಚಾರಣೆನಡೆಸಿ ಸೂಕ್ತ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ನಿರ್ಣಯ ಬರೆಯಬೇಕೆಂದು ಸೂಚಿಸಲಾಗಿತ್ತು. ಆದರೆ ಪಂಚಾಯಿತಿ ಕೈಗೊಂಡ ನಿರ್ಣಯದಲ್ಲಿ ಉಲ್ಲೇಖವೇ ಇಲ್ಲ.

ಕಾಮಗಾರಿಗೆಪಂಚಾಯಿತಿ ಬಿಲ್!

ಊರಿನಕೆಲವು ಮನೆಯವರು ಸೇರಿಕೊಂಡು ಮೋರಿ ಹಾಗೂ ರಸ್ತೆಯನ್ನು ೮೫ ಸಾವಿರ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರು. ಗ್ರಾಮ ಪಂಚಾಯಿತಿ ಗ್ರಾಮ ಸಭೆ ವರದಿಯಲ್ಲಿ ಮಲೆತ್ತಡ್ಕ- ಕೊಪ್ಪರತೊಟ್ಟು ರಸ್ತೆ ಅಭಿವೃದ್ಧಿಗೆ ,೦೧,೨೬೫ರೂ. ಹಾಗೂ ಕಿರು ಸೇತುವೆಗೆ ೭೦,೨೬೭ ರೂ.ಅನುದಾನ ನೀಡಿರುವುದಾಗಿ ಹೇಳಿಕೊಂಡಿದೆ.

ಜಿಲ್ಲಾಪಂಚಾಯಿತಿಗೆ ದೂರು!

೨೦೨೨-೨೩ನೇ ಸಾಲಿನ ಗ್ರಾಮ ಪಂಚಾಯಿತಿ ೧೫ನೇ ಹಣಕಾಸು ಯೋಜನೆ ಅನುದಾನದ ಮೂಲಕ ರಚಿಸಲಾದ ಸೇತುವೆ ೨೦೨೫ ಜುಲೈನಲ್ಲಿ ಕುಸಿತವಾಗಿದೆ. ಸರ್ಕಾರಿ ಟೆಂಡರ್ ಕಾಮಗಾರಿ ಷರತ್ತುಗಳನ್ನು ನಿರ್ಲಕ್ಷಿಸಿ ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ನಡೆದಿರುವುದರಿಂದ ಸಾರ್ವಜನಿಕ ತೆರಿಗೆ ಹಣ ಪೋಲಾಗಿದೆ ಎಂದುಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದಾರೆ.

ಜನರೇದುಡ್ಡು ತರಿಸಿದರು!

ದೇವಿನಗರ-ಕಲ್ಲಾಜೆ- ಆಜೇರು ಸಂಪರ್ಕ ರಸ್ತೆಯ ಮಡ್ಯಾರಬೆಟ್ಟು ಎಂಬಲ್ಲಿ ೨೦೨೨ರಲ್ಲಿ ಪಂಚಾಯಿತಿ ನಡೆಸಿದ ಮೋರಿ ಕಾಮಗಾರಿ ಮಳೆಗೆ ಕೊಚ್ಚಿ ಹೋಗಿತ್ತು. ಬಗ್ಗೆ ದುರಸ್ತಿಮಾಡಲು ಜನಪ್ರತಿನಿಽಗಳು ಯಾರೊಬ್ಬರೂ ಮುಂದೆ ಬರದ ಸಂದರ್ಭ ಸಾಮಾಜಿಕ ಹೋರಾಟಗಾರ ವೆಂಕಟ್ರಮಣ ಪುಣಚ ವಿವಿಧ ಕಡೆಗೆ ಅರ್ಜಿಯನ್ನು ಬರೆದು ಸದ್ಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ಣಯದಂತೆ ೩೫ ಲಕ್ಷ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣ ಪ್ರಾರಂಭವಾಗಿದೆ.

"

ಗ್ರಾಮೀಣ ಭಾಗದಲ್ಲಿ ರಸ್ತೆಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿದೆ. ತಂತ್ರಜ್ಞಾನಗಳು ಮುಂದುವರಿದರೂ ಅದನ್ನು ಬಳಸಿಕೊಳ್ಳದೆ, ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಪುಣಚ ೪ನೇ ವಾರ್ಡ್ನಲ್ಲಿ ರಸ್ತೆಯಲ್ಲಿ ನಿರಂತರ ಸಮಸ್ಯೆ ಕಾಣುತ್ತಿದ್ದು, ಪ್ರತಿಯೊಂದನ್ನು ಹೋರಾಟ ಮಾಡಿ ತರುವ ಸ್ಥಿತಿಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net