ಪುತ್ತೂರು ದೇವಳ ಪುಷ್ಕರಣಿ ನಿರ್ಮಾಣ ಡಿಪಿಆರ್ ಸಲ್ಲಿಕೆ (Mahalingeshwara Temple)

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಾಗು ಅಭಿವೃದ್ಧಿ ಕಾಮಗಾರಿಗಳ ವಿಜ್ಞಾಪನಾ ಪತ್ರವನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮೊದಲಾದವರಿದ್ದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಾಗು ಅಭಿವೃದ್ಧಿ ಕಾಮಗಾರಿಗಳ ವಿಜ್ಞಾಪನಾ ಪತ್ರವನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನ ಅಭಿವೃದ್ಧಿ ವಿಜ್ಞಾಪನಾ ಪತ್ರ ಬಿಡುಗಡೆ
  • ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ

ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಾಗು ಅಭಿವೃದ್ಧಿ ಕಾಮಗಾರಿಗಳ ವಿಜ್ಞಾಪನಾ ಪತ್ರ ಬಿಡುಗಡೆ ಬುಧವಾರ ನಡೆಯಿತು.

ವಿಜ್ಞಾಪನಾಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ದೇವಸ್ಥಾನದ ಪಶ್ಚಿಮ ಭಾಗದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಪುಷ್ಕರಣಿಯ ಡಿಪಿಆರ್ ಸರ್ಕಾರಕ್ಕೆ ಸಲ್ಲಿಕೆಯಾಗಲಿದ್ದು, .೨೫ ಕೋಟಿರೂ.ನಲ್ಲಿ ಕೆರೆಯ ಕಾಮಗಾರಿ ಪ್ರಾರಂಭವಾಗಲಿದೆ. ೫೦ ಲಕ್ಷ ರೂ.ವೆಚ್ಚದಲ್ಲಿ ಅಯ್ಯಪ್ಪ ಮಂದಿರ ನಿರ್ಮಾಣ ಮಾಡಲಾಗುವುದು. ಇರುಮುಡಿ ಕಟ್ಟಲು ಜಾಗ ಬೇಕೆಂಬ ಭಕ್ತರ ಬೇಡಿಕೆಗೆ ಮೂಲಕ ಸ್ಪಂದಿಸಲಾಗುತ್ತಿದೆ.ಜಾಗ ಹಾಗೂ ಮಂದಿರ ನಿರ್ಮಾಣಕ್ಕೆ ದಾನಿಗಳ ನೆರವು ಪಡೆಯಲಾಗುವುದು ಎಂದರು.

ವ್ಯವಸ್ಥಾಪನಾಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ನಳಿನಿ ಪಿ.ಶೆಟ್ಟಿ, ದಿನೇಶ್ಪಿ.ವಿ ಕುಲಾಲ್, ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ಬಿ.ಈಶ್ವರ ನಾಯ್ಕ ಬೇಡೆಕರ್, ವಿನಯ ಕುಮಾರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಪ್ರಮುಖರಾದಉಮಾನಾಥ ಶೆಟ್ಟಿ, ನಿಹಾಲ್ ಶೆಟ್ಟಿ, ಮುರಳೀಧರ ರೈ, ಚಂದ್ರಹಾಸ ಶೆಟ್ಟಿ, ಸನತ್ ರೈ ವಳತ್ತಡ್ಕ, ಶಿವರಾಮಆಳ್ವ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಜಾಗಹಸ್ತಾಂತರ:

ಪ್ರಶ್ನಾಚಿಂತನೆಯಲ್ಲಿಕಂಡುಬಂದಂತೆ ಅಯ್ಯಪ್ಪ ಗುಡಿ ಹಸ್ತಾಂತರಕ್ಕೆ ಹಿಂದೆ ತಳಪಾಯ ಹಾಕಿದ್ದ ಜಾಗ ಉದ್ಯಮಿ ನಿತ್ಯಾನಂದ ಶೆಟ್ಟಿ ಎಂ. ಅವರ ಸ್ವಾಧೀನವಿದ್ದು, ಮಾತುಕತೆ ಮೂಲಕ ಅದನ್ನು ದೇವಸ್ಥಾನ ಖರೀದಿಸುವ ಕಾರ್ಯ ಮಾಡಿದೆ. ಸುಮಾರು ಸೆಂಟ್ಸ್ ಜಾಗವನ್ನು೨೫ ಲಕ್ಷ ರೂ.ಗೆ ದೇವಸ್ಥಾನಕ್ಕೆಹಸ್ತಾಂತರಿಸಿದ್ದು, ೧೦ ಲಕ್ಷ ರೂ.ಮೊತ್ತವನ್ನು ದೇವರ ಸನ್ನಿಧಿಯಲ್ಲಿ ನೀಡಲಾಯಿತು.

ಕೌಂಟರ್ನಲ್ಲಿ ದೇಣೀಗೆರಶೀದಿ:

ದೇವಸ್ಥಾನಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತಾಧಿಗಳಿಗೆ ದೇಣಿಗೆ ನೀಡಲು ದೇವಸ್ಥಾನದ ಕೌಂಟರ್ನಲ್ಲಿ ಅವಕಾಶಕಲ್ಪಿಸಲಾಗಿದೆ. ದೂರದ ಊರಿನ ಭಕ್ತರಿಗೆ ದೇವಾಲಯ ಅಭಿವೃದ್ಧಿ ಸಮಿತಿ ಖಾತೆ ವಿವರ ಬಿಡುಗಡೆ ಮಾಡಿದ್ದು, ಆನ್ಲೈನ್ಮೂಲಕವೂ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

"

ಅಯ್ಯಪ್ಪ ಮಂದಿರದಲ್ಲಿ ಭಕ್ತರ ಸಹಕಾರದಲ್ಲಿ ಡಿ.೨೯ರಂದು ೧೦೮ ಕಾಯಿ ಗಣಪತಿ ಹೋಮ, ಶತರುದ್ರಾಭಿಷೇಕ, ನವಗ್ರಹ ಶಾಂತಿ ಹೋಮ, ರಾತ್ರಿ ವನದುರ್ಗಾ ಹೋಮ, ೩೦ರಂದು ಅಯ್ಯಪ್ಪ ಗುಡಿಯಲ್ಲಿ ಗಣಪತಿ ಹೋಮ, ಅಭಿಷೇಕ, ಸಭಾಭವನದಲ್ಲಿ ವಿಷ್ಣು ಸಹಸ್ರನಾಮ, ಹೋಮಗಳು, ನಾಗನಗುಡಿಯಲ್ಲಿ ಸರ್ಪಸಂಸ್ಕಾರ, ಆಶ್ಲೇಷಬಲಿ, ವಟು ಆರಾಧನೆ ಕಾರ್ಯಕ್ರಮಗಳು ಪರಿಹಾರದ ದೃಷ್ಟಿಯಿಂದ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net