ಸದ್ಬುದ್ಧಿ ಕರುಣಿಸುವಂತೆ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ Temple

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Published on

ಪುತ್ತೂರು:ಪುತ್ತಿಲ ಪರಿವಾರದಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ವಿಐಪಿ ಗೇಟ್ನಲ್ಲಿ ಬಿಜೆಪಿಬೇಡದವರಿಗೆ ಪರಿವಾರ ಯಾಕೆ ಎಂದು ಪ್ರಶ್ನಿಸಿ ಹೊರದಬ್ಬಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತಿಲ ಪರಿವಾರದ ಸ್ಥಾಪಕಾಧ್ಯಕ್ಷ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸಮಸ್ತಹಿಂದು ಸಮಾಜ ಒಟ್ಟಾಗಿ ದೇಶದ ಉನ್ನತಿಗಾಗಿ ಕೆಲಸ ಮಾಡಬೇಕೆನ್ನುವುದು ಭಾವನೆಯಾಗಿದೆ. ಹಿಂದು ಸಮಾಜದ ಕಾರ್ಯಕ್ರಮ ಎಂಬ ಕಾರಣಕ್ಕೆ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದು, ಸಂದರ್ಭ ಅಪಮಾನಮಾಡಿದರು. ಮಹಾಲಿಂಗೇಶ್ವರನ ಮಣ್ಣಿನಲ್ಲಿ ಪತ್ನಿ ಕಣ್ಣೀರು ಹಾಕುವ ಸಂದರ್ಭ ಎದುರಾಗಿದೆ. ಆಗಿರುವ ವಿಚಾರ ಮಹಾಲಿಂಗೇಶ್ವರನಿಗೆ ಗೊತ್ತಿದೆ, ಅವನೇ ತೀರ್ಮಾನ ಮಾಡಬೇಕಾಗಿದೆ ಎಂದು ಪ್ರಾರ್ಥಿಸಿ ಕಣ್ಣೀರಿಟ್ಟರು.

ಪ್ರಧಾನಅರ್ಚಕ ವಿ.ಎಸ್.ಭಟ್ಧಾರ್ಮಿಕ ವಿಧಿ ನಡೆಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಣಿಕಠ, ಪ್ರಮುಖರಾದ ನಾಗೇಶ್ ಟಿ.ಎಸ್., ವಿರೂಪಾಕ್ಷಮಚ್ಚಿಮಲೆ, ಜಯಲಕ್ಷ್ಮೀ ಶಗ್ರಿತ್ತಾಯ, ನಾಗೇಂದ್ರ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು.

ಯಾರೂಸಂಪರ್ಕಿಸಿಲ್ಲ!

ರಾಜಕೀಯವಿದ್ಯಮಾನ ನಡೆದ ಸಂದರ್ಭ ಕರೆಯ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್ ಸಂದೇಶ ಹಾಕಿರುವ ಕಾರಣ ವ್ಯಕ್ತಿಗೆ ಪರಿಚಯವಿರಲೇ ಬೇಕು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೋಮವಾರ ಬೆಳಗ್ಗೆ ಸಾಂತ್ವನ ಹೇಳಿದ್ದಾರೆ. ಮಾಜಿ ರಾಜ್ಯಾಧ್ಯಕ್ಷ, ಜಿಲ್ಲೆಯ ಶಾಸಕರು ಸೇರಿ ಪ್ರಮುಖರು ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಪುತ್ತಿಲ ಪರಿವಾರ ಅರುಣ್ ಕುಮಾರ್ ಪುತ್ತಿಲ ಸಂಪರ್ಕಿಸುವ ಕಾರ್ಯವಾಗಿಲ್ಲ.

ಬಿಜೆಪಿಜಿಲ್ಲಾಧ್ಯಕ್ಷರು ಭೇಟಿ!

ಮಾನಸಿಕವಾಗಿಕುಗ್ಗಿದ ಪ್ರಸನ್ನ ಮಾರ್ತ ಅವರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನಿವಾಸಕ್ಕೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಭೇಟಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಅಮ್ಟೂರು, ಸುಲೋಚನಾ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರಿದ್ದರು.

"

ಪಕ್ಷದ ಜವಾಬ್ದಾರಿ ಇರುವ ಹಲವು ಮಂದಿ ಭಾಗವಹಿಸಿದ್ದು, ಅಪಮಾನ ಮಾಡುವ ಕಾರ್ಯ ನನಗೊಬ್ಬನಿಗೇ ಆಗಿದೆ. ಯಾರದೋ ಪ್ರೇರಣೆಗೆ ಒಳಗಾಗಿ ಹಾಗೆ ಮಾಡಿರಬಹುದು. ಕೃತ್ಯ ಎಸಗಿದಾತನಿಗೆ ಸಂಸಾರ ಇರುವ ಕಾರಣ ದೇವರು ಯಾವುದೇ ತಪ್ಪು ತೀರ್ಮಾನ ಮಾಡಬಾರದು. ಮಾಡಿದವರಿಗೆ ಹಾಗೂ ಮಾಡಿಸಿದವರಿಗೆ ಸದ್ಬುದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ ಮಾಡಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net