ಬೆಳ್ಳಿಪ್ಪಾಡಿ ಗ್ರಾಮದ ಕಟಾರದ ಅರಣ್ಯಕ್ಕೆ ಸಂಬಂಧಿಸಿದ ಸರ್ಕಾರಿ ಜಾಗದಲ್ಲಿ ಮೂರು ರಸ್ತೆಗಳು ಸೇರುವ ರಸ್ತೆ ಭಾಗದಲ್ಲಿ ಈ ಪ್ರಯೋಗ ನಡಿದಿದೆ. ಈ ಸುದ್ದಿ ಪ್ರಚಾರವಾಗುತ್ತಿದ್ದಂತೆಯೇ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಶನಿವಾರ ರಾತ್ರಿ ವೇಳೆ ಯಾರೋ ಮೂರು ಮಾರ್ಗ ಸೇರುವಲ್ಲಿ ವಾಮಾಚಾರ ಮಾಡಿದ್ದಾರೆಂಬ ಆರೋಪ ವ್ಯಕ್ತವಾಗಿದೆ.